ಚಿಕ್ಕಬಳ್ಳಾಪುರದಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ಬಿಸಿಲ ಬೇಗೆಗೆ ಕಂಗೆಟ್ಟು ಸ್ವಿಮ್ಮಿಂಗ್ ಪೂಲ್ ಮೊರೆ ಹೋದ ಯುವಕರು
ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ಮನೆಯಿಂದ ಆಚೆ ಬರಲು ಮಹಿಳೆಯರು, ಮಕ್ಕಳು ಹೆಣಗಾಡುತ್ತಿದ್ದರೆ, ಇತ್ತ ಯುವಕರು ಬಿಸಿಲಿನ ತಾಪದಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್ ಮೊರೆಹೋಗಿದ್ದಾರೆ.
ಚಿಕ್ಕಬಳ್ಳಾಪುರ, ಏ.06: ಕಾಲೇಜಿನಿಂದ ಮನೆಗೆ ಹೋಗಲು ಬಿಸಿಲ ಬೇಗೆ, ಬಿಸಿಲಿನಿಂದ ಬಚಾವಾಗಲು ಬ್ಯಾಗಲ್ಲಿದ್ದ ಛತ್ರಿ ಹಿಡಿದುಕೊಂಡು ಸೂರ್ಯನಿಗೆ ಹಿಡಿ ಶಾಪ ಹಾಕುತ್ತಿರುವುದು ಚಿಕ್ಕಬಳ್ಳಾಪುರ(Chikkaballapura) ನಗರದಲ್ಲಿ. ಮದ್ಯಾಹ್ನ 1 ಗಂಟೆ ಸಮಯಕ್ಕೆ ಚಿಕ್ಕಬಳ್ಳಾಪುರ ನಗರದಲ್ಲಿ ತಾಪಮಾನ ಬರೋಬ್ಬರಿ 36 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಇದ್ರಿಂದ ರೈತರು ವಿದ್ಯಾರ್ಥಿನಿಯರು, ವಾಹನ ಸವಾರರು, ಬಿಸಿಲಿನಿಂದ ಬಚಾವಾಗಲು, ತಲೆ ಮೇಲೆ ಟವೆಲ್, ಟೋಪಿ, ವೇಲ್ ಧರಿಸಿಸಿದ್ರೆ, ಇನ್ನು ಕೆಲವರು ಛತ್ರಿ ಹಾಗೂ ಮರಗಳ ನೆರಳಿನ ಮೊರೆಹೋಗಿದ್ದಾರೆ. ಇನ್ನು ಕೆಲ ಯುವಕರಂತೂ ಬಿಸಿಲಿನಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ ಓಪನ್ ಆದ ಸರ್ಕಾರಿ ಈಜುಕೊಳ
ಇನ್ನು ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸರ್ಕಾರಿ ಈಜುಕೊಳ ಈಗ ಮತ್ತೆ ಆರಂಭವಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಬ್ಯಾಚ್ಗಳನ್ನ ಮಾಡಲಾಗಿದ್ದು, ಯುವಕರನ್ನ ನಿಯಂತ್ರಿಸಿಲು, ಸ್ವಿಮ್ಮಿಂಗ್ ನಿರ್ವಾಹಕರು ಹರಸಾಸ ಪಡುತ್ತಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು,ಬಿಸಿಲಿನಿಂದ ಬಚಾವಾಗಲು ಜನ ತಮ್ಮದೇ ಶೈಲಿಯಲ್ಲಿ ಸೂರ್ಯನಿಂದ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ