AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!

ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 11, 2026 | 1:10 PM

Share

ಚಿಕ್ಕಬಳ್ಳಾಪುರದಲ್ಲಿ 28 ವರ್ಷದ ಚೈತ್ರಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗಂಡನ ಕಿರುಕುಳದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಚೈತ್ರಾ, ಪ್ರಿಯಕರ ಶಬ್ಬೀರ್ ಜೊತೆ ಬದುಕುತ್ತಿದ್ದರು. ಆಕೆ ಸಾವಿಗೀಡಾದ ಬಳಿಕ ಪ್ರಿಯಕರ ನಾಪತ್ತೆಯಾಗಿದ್ದು, ಹತ್ಯೆ ಶಂಕೆ ವ್ಯಕ್ತವಾಗಿದೆ. ನಂದಿಗಿರಿಧಾಮ ಪೊಲೀಸರು ತನಿಖೆ ನಡೆಸುತ್ತಿದ್ದು, ಚೈತ್ರಾ ಮಕ್ಕಳು ತಬ್ಬಲಿಗಳಾಗಿದ್ದಾರೆ.

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 11: ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ 28 ವರ್ಷದ ಚೈತ್ರಾ ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗಂಡನ ಕಿರುಕುಳದಿಂದ ಬೇಸತ್ತು, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಚೈತ್ರಾ, ಮಂಚಿನಬೆಲೆ ಗ್ರಾಮದ ಶಬ್ಬೀರ್ ಎಂಬುವವರೊಂದಿಗೆ ಪ್ರೇಮಾಂಕುರವಾಗಿ, ಗಂಡ-ಹೆಂಡತಿಯಂತೆ ಬದುಕುತ್ತಿದ್ದರು. ಶಬ್ಬೀರ್ ಜೊತೆಗಿದ್ದಾಗಲೇ ಚೈತ್ರಾ ಮೃತಪಟ್ಟಿದ್ದು, ಅವರ ಕತ್ತಿನ ಭಾಗದಲ್ಲಿ ಹಗ್ಗದಿಂದ ಬಿಗಿದ ಗುರುತುಗಳು ಪತ್ತೆಯಾಗಿವೆ. ಚೈತ್ರಾ ಸಾವಿಗೀಡಾಗುತ್ತಿದ್ದಂತೆ, ಪ್ರಿಯಕರ ಶಬ್ಬೀರ್ ಆಕೆಯ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು ಹಲವು ದಿನಗಳಾದರೂ ಆತ ಪತ್ತೆಯಾಗಿಲ್ಲ. ಇದರಿಂದ ಪ್ರಿಯಕರನಿಂದಲೇ ಚೈತ್ರಾಳ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us