ಈಶಾ ಫೌಂಡೇಶನ್ ಆದಿಶಿವ ಪ್ರತಿಮೆ ನೋಡಲು ಆಗಮಿಸಿದ ಜನ, ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಜನಜಾತ್ರೆ

|

Updated on: Nov 04, 2024 | 10:25 AM

ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಬಂದ ಕಾರಣ ಬೆಂಗಳೂರುಗೆ ಹೋಗುವವರ ಸಂಖ್ಯೆ ನಿಲ್ದಾಣದಲ್ಲಿ ಹೆಚ್ಚಿದೆಯಂತೆ. ಶಾಲಾ ಕಾಲೇಜುಗಳಿಗೆ ಹೋಗುವವರು ಮತ್ತು ಕಚೇರಿಗಳಿಗೆ ಹೋಗುವವರು ಬಸ್ ಹತ್ತಲು ಧಾವಂತ ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಯಾಣಿಕರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು!

ಚಿಕ್ಕಬಳ್ಳಾಪುರ: ಇದ್ಯಾವುದೇ ಜಾತ್ರೆ ಅಲ್ಲ, ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರಲು ಬಸ್​ ನಿಲ್ದಾಣದಲ್ಲಿ ಜನರ ನೂಕುನುಗ್ಗಾಟ. ದೀಪಾವಳಿ ಪ್ರಯುಕ್ತ ನಗರದಲ್ಲಿ ಈಶಾ ಪ್ರತಿಷ್ಠಾನದಿಂದ ನಿರ್ಮಿಸಲಾಗಿರುವ ಆದಿಶಿವನ ಪ್ರತಿಮೆ ದರ್ಶನ್ ಮಾಡಿಕೊಳ್ಳಲು ಸಾವಿರಾರು ಜನ ಆಗಮಿಸಿದ್ದರು. ಜನಜಂಗುಳಿಯ ನಿಮಿತ್ತ ಬೆಂಗಳುರುಗೆ ಹೆಚ್ಚುವರಿ ಬಸ್​​ಗಳ ಏರ್ಪಾಟನ್ನು ಕೆಎಸ್​ಆರ್​​ಟಿಸಿ ಮಾಡಿದ್ದರೂ ಈ ಪಾಟಿ ಜನ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಳೆಗೆ ಕೆಂಪು ಸುಂದರಿ ಟೊಮೇಟೊ ಬೆಲೆ ಭಾರಿ ಕುಸಿತ, ರೈತರು ಕಂಗಾಲು