AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!

ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: May 11, 2026 | 10:23 AM

Share

ಅನಿಲ್ ಎಂಬ ರೈತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಡ್ಡಗಲ್ ಗ್ರಾಮದಲ್ಲಿ ಸೇಬು ಬೆಳೆದು ಯಶಸ್ಸಿನ ಕಥೆ ಬರೆದಿದ್ದಾರೆ. ಸಾಮಾನ್ಯವಾಗಿ ತಂಪಾದ ವಾತಾವರಣದಲ್ಲಿ ಬೆಳೆಯುವ ಸೇಬನ್ನು, ಬಿಸಿಲಿನ ವಾತಾವರಣವಿರುವ ಚಿಕ್ಕಬಳ್ಳಾಪುರದಲ್ಲಿ ಬೆಳೆಸುವುದು ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಅನಿಲ್ ಅವರು, ಹೊಸ ಪ್ರಯತ್ನವಾಗಿ ಸೇಬು ಕೃಷಿಯತ್ತ ಆಸಕ್ತಿ ವಹಿಸಿದರು.

ಚಿಕ್ಕಬಳ್ಳಾಪುರ, ಮೇ 11: ಅನಿಲ್ ಎಂಬ ರೈತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಡ್ಡಗಲ್ ಗ್ರಾಮದಲ್ಲಿ ಸೇಬು ಬೆಳೆದು ಯಶಸ್ಸಿನ ಕಥೆ ಬರೆದಿದ್ದಾರೆ. ಸಾಮಾನ್ಯವಾಗಿ ತಂಪಾದ ವಾತಾವರಣದಲ್ಲಿ ಬೆಳೆಯುವ ಸೇಬನ್ನು, ಬಿಸಿಲಿನ ವಾತಾವರಣವಿರುವ ಚಿಕ್ಕಬಳ್ಳಾಪುರದಲ್ಲಿ ಬೆಳೆಸುವುದು ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಅನಿಲ್ ಅವರು, ಹೊಸ ಪ್ರಯತ್ನವಾಗಿ ಸೇಬು ಕೃಷಿಯತ್ತ ಆಸಕ್ತಿ ವಹಿಸಿದರು.

ಗುಬ್ಬಿಯ ಶೇಷಣ್ಣ ಅವರ ಮಾರ್ಗದರ್ಶನ ಪಡೆದ ಅನಿಲ್, ಅವರ ಸಲಹೆಯಂತೆ ಸಸಿಗಳನ್ನು ನೆಟ್ಟರು. ಇದು ಅವರ ಮೊದಲ ಬೆಳೆಯಾಗಿದ್ದು, ಒಂದು ಎಕರೆಯಲ್ಲಿ ಸುಮಾರು 400 ಗಿಡಗಳನ್ನು ನೆಡಲಾಗಿದೆ. ಪ್ರತಿ ಗಿಡದಿಂದ 10 ರಿಂದ 15 ಕೆಜಿ ಸೇಬು ಇಳುವರಿ ನಿರೀಕ್ಷಿಸಲಾಗಿದೆ. ಅಂದಾಜು 5 ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಅನಿಲ್ ಅವರ ಈ ಪ್ರಯೋಗವು ಯಶಸ್ವಿಯಾಗಿದೆ. ಅವರ ಸಾಧನೆ ಇತರ ರೈತರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us