ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಅಂತ ಜನಕ್ಕೆ ಅರ್ಥವಾಗಿದೆ: ಡಾ ಕೆ ಸುಧಾಕರ್
ಚಿಕ್ಕಬಳ್ಳಾಪುರ ಕ್ಷೇತ್ರ ಜನ ಬಿಜೆಪಿ ಅಭ್ಯರ್ಥಿಯಾಗಿರುವ ತನ್ನನ್ನು ಗೆಲ್ಲಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕೆಂದು ಜನ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತದ ಅಖಂಡತೆಗೆ, ರಾಷ್ಟ್ರದ ರಕ್ಷಣೆಗೆ, ಭಾರತದ ಅಭಿವೃದ್ಧಿಗೆ ಮತ್ತು ವಿಕಸಿತ ಭಾರತಕ್ಕೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಅನಿವಾರ್ಯ ಅನ್ನೋದನ್ನು ಜನ ಮನಗಂಡಿದ್ದಾರೆ ಎಂದು ಡಾ ಕೆ ಸುಧಾಕರ್ ಹೇಳಿದರು.
ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ (Dr K Sudhakar) ನಿನ್ನೆ ರಾತ್ರಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ (Devanahalli Assembly segment) ಬಿರುಸಿನ ಪ್ರಚಾರ ನಡೆಸಿದರು. ಅವರ ಮತ್ತು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ (SR Vishwanath) ನಡುವಿನ ಅಸಮಾಧಾನ ಕೊನೆಗೊಂಡಿರುವಂತಿದೆ. ನಿನ್ನೆ ರಾತ್ರಿ ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಚುನಾವಣಾ ಸಮಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ, ಆದರೆ ತಾವಾಗಿಯೇ ಅವು ಶಮನಗೊಳ್ಳುತ್ತವೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ಚಿಕ್ಕಬಳ್ಳಾಪುರ ಕ್ಷೇತ್ರ ಜನ ಬಿಜೆಪಿ ಅಭ್ಯರ್ಥಿಯಾಗಿರುವ ತನ್ನನ್ನು ಗೆಲ್ಲಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕೈ ಬಲಪಡಿಸಬೇಕೆಂದು ಜನ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತದ ಅಖಂಡತೆಗೆ, ರಾಷ್ಟ್ರದ ರಕ್ಷಣೆಗೆ, ಭಾರತದ ಅಭಿವೃದ್ಧಿಗೆ ಮತ್ತು ವಿಕಸಿತ ಭಾರತಕ್ಕೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಅನಿವಾರ್ಯ ಅನ್ನೋದನ್ನು ಜನ ಮನಗಂಡಿದ್ದಾರೆ ಎಂದು ಡಾ ಕೆ ಸುಧಾಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಮಪತ್ರ ಸಲ್ಲಿಸುವ ಮೊದಲು ಎಂಟಿಬಿ ನಾಗರಾಜ್ ಕಾಲಿಗೆ ನಮಸ್ಕರಿಸಿದ ಡಾ ಕೆ ಸುಧಾಕರ್