Chikkaballapura Utsav: ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸಚಿವ ಡಾ ಕೆ ಸುಧಾಕರ್
ಕೈಯಲ್ಲಿ ಪೊರಕೆ ಹಿಡಿದು ರಸ್ತೆ ಗುಡಿಸುವ ಕಾರ್ಯದಲ್ಲಿ ಸಚಿವರು ತೊಡಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಚಿಕ್ಕಬಳ್ಳಾಪುರ: ಜನೆವರಿ 7 ರಿಂದ 14 ರವರೆಗೆ ನಡೆಯಲಿರುವ ಚಿಕ್ಕಬಳ್ಳಾಪುರ ಉತ್ಸವದ (Chikkaballapura Utsav) ಬಗ್ಗೆ ನಾವು ವರದಿ ಮಾಡುತ್ತಲೇ ಇದ್ದೇವೆ. ಮೈಸೂರು ದಸರಾ ಮತ್ತು ಹಂಪಿ ಉತ್ಸವ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಉತ್ಸವ ಆಯೋಜಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಹೇಳಿದ್ದಾರೆ. ಸಿದ್ಧತೆಗಳ ಭಾಗವಾಗಿ ಖುದ್ದು ಸಚಿವರೇ ಇಂದು (ಗುರುವಾರ) ಸ್ವಚ್ಛತಾ ಅಭಿಯಾನದಲ್ಲಿ (Cleaning Campaign) ಕೈಯಲ್ಲಿ ಪೊರಕೆ ಹಿಡಿದು ಭಾಗಿಯಾದರು. ನಗರದ ರಸ್ತೆಗಳನ್ನು ಗುಡಿಸುವ ಕಾರ್ಯದಲ್ಲಿ ಸಚಿವರು ತೊಡಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ಜೊತೆ ಜಿಲ್ಲಾಧಿಕಾರಿ ಎನ್ ಎಮ್ ನಾಗರಾಜ್, ಜಿಪಂ ಸಿಇಓ ಪಿ ಶಿವಶಂಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ ಕೂಡ ಇದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ