ಕೊಪ್ಪಳದಲ್ಲಿ ಅಡಗಿದ್ದ ಬೆಂಗಳೂರಿನ ಹಂದಿಕಳ್ಳನಿಗೆ ಚಿಕ್ಕಜಾಲ ಪೊಲೀಸರ ಗುಂಡೇಟು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 22, 2022 | 1:18 PM

ಕಳ್ಳರು ಪೊಲೀಸರ ಮೇಲೂ ಹಲ್ಲೆ ಮಾಡಿ ಪರಾರಿಯಾಗುವ ಪ್ರಯತ್ನ ಮಾಡಿದ್ದರಿಂದ ಇನ್ಸ್ಪೆಕ್ಟರ್ ಪ್ರವೀಣ್ ಒಬ್ಬ ಕಳ್ಳನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

ಕೊಪ್ಪಳ: ಕಳೆದವಾರ ಬೆಂಗಳೂರು ಹತ್ತಿರದ ಚಿಕ್ಕಜಾಲ ಮತ್ತು ದೊಡ್ಡಬಳ್ಳಾಪುರ ಭಾಗದಲ್ಲಿ ಸುಮಾರು 100 ಸಾಕುಹಂದಿಗಳನ್ನು (domesticated pigs) ಕಳುವು ಮಾಡುವುದರ ಜೊತೆಗೆ ವೆಂಕಟರಮಣಪ್ಪ (Venkataramanappa) ಹೆಸರಿನ ವ್ಯಕ್ತಿಯ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಚಿಕ್ಕಜಾಲದ ಪೊಲೀಸರು ಕೊಪ್ಪಳ ಜಿಲ್ಲೆಯ ಮುಷ್ಟೂರ ಹೆಸರಿನ ಗ್ರಾಮದಲ್ಲಿ ಬಂಧಿಸಿದ್ದಾರೆ. ಕಳ್ಳರು ಪೊಲೀಸರ ಮೇಲೂ ಹಲ್ಲೆ ಮಾಡಿ ಪರಾರಿಯಾಗುವ ಪ್ರಯತ್ನ ಮಾಡಿದ್ದರಿಂದ ಇನ್ಸ್ಪೆಕ್ಟರ್ ಪ್ರವೀಣ್ (PSI Praveen) ಒಬ್ಬ ಕಳ್ಳನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.