ಜಾತ್ರೆಯ ರಥಕ್ಕೇ ಹೋಗಿ ಡಿಕ್ಕಿ ಹೊಡೆಯಿತು ಎತ್ತಿನಗಾಡಿ! ಇಬ್ಬರ ಸ್ಥಿತಿ ಗಂಭೀರ

Updated on: Jan 28, 2026 | 10:28 AM

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆಯಲ್ಲಿ ಸಾಲುಸಾಲು ಅವಘಡಗಳು ಸಂಭವಿಸಿವೆ. ರಥೋತ್ಸವದ ನಂತರ ನಡೆಯುವ ಪಾನಕದ ಎತ್ತಿನ ಗಾಡಿಗಳ ಓಟದ ವೇಳೆ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನರ ನಡುವೆ ನುಗ್ಗಿದವು. ಈ ವೇಳೆ ರಥಕ್ಕೆ ಡಿಕ್ಕಿಹೊಡೆಯುವುದಲ್ಲದೇ ಅಡ್ಡ ಬಂದ ವ್ಯಕ್ತಿಗೂ ಎತ್ತಿನಗಾಡಿ ಡಿಕ್ಕಿ ಹೊಡೆದಿದ್ದು, ಮತ್ತೊಬ್ಬ ವ್ಯಕ್ತಿ ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಕ್ಕಮಗಳೂರು, ಜನವರಿ 28:  ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆಯಲ್ಲಿ ಸಾಲುಸಾಲು ಅವಘಡಗಳು ಸಂಭವಿಸಿವೆ. ರಥೋತ್ಸವದ ನಂತರ ನಡೆಯುವ ಪಾನಕದ ಎತ್ತಿನ ಗಾಡಿಗಳ ಓಟದ ವೇಳೆ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನರ ನಡುವೆ ನುಗ್ಗಿದವು. ಈ ವೇಳೆ ರಥಕ್ಕೆ ಡಿಕ್ಕಿಹೊಡೆಯುವುದಲ್ಲದೇ ಅಡ್ಡ ಬಂದ ವ್ಯಕ್ತಿಗೂ ಎತ್ತಿನಗಾಡಿ ಡಿಕ್ಕಿ ಹೊಡೆದಿದ್ದು, ಮತ್ತೊಬ್ಬ ವ್ಯಕ್ತಿ ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published on: Jan 28, 2026 10:27 AM
Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More