ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ: ಇಲ್ಲಿದೆ ಭಯಾನಕ ದೃಶ್ಯ

Edited By:

Updated on: May 31, 2025 | 3:15 PM

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿಯುವ ಆತಂಕ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಸಂಚಾರಕ್ಕೆ ಅಪಾಯವಿದೆ. ಕಳೆದ ವರ್ಷವೂ ಕುಸಿತವಾಗಿದ್ದ ಸ್ಥಳದಲ್ಲಿ ಮತ್ತೆ ಕುಸಿತದ ಭೀತಿ ಇದೆ. ಹಲವು ಕಡೆ ಮಣ್ಣು ಕುಸಿದು ರಸ್ತೆಗೆ ಬೀಳುವ ಸಾಧ್ಯತೆಯಿದೆ. ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗುವ ಸಂಭವವಿದೆ.

ಚಿಕ್ಕಮಗಳೂರು, ಮೇ 31: ಮಂಗಳೂರು ಟು ಚಿಕ್ಕಮಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಗುಡ್ಡ ಕುಸಿತದ ಆತಂಕ ಉಂಟಾಗಿದೆ. ಸಾವಿರಾರು ಎತ್ತರದ ಮೇಲ್ಬಾಗದಲ್ಲೇ ಕುಸಿತ ಉಂಟಾಗಿದ್ದು, ಮಳೆ ಮುಂದುವರೆದರೆ ಗುಡ್ಡ ಕುಸಿದು ರಸ್ತೆಗೆ ಬಿಳುವ ಆತಂಕ ಎದುರಾಗಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತವೆ. ಚಾರ್ಮಾಡಿ ಘಾಟಿಯ ಹತ್ತಾರು ಕಡೆ ಕುಸಿತ ಉಂಟಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.