ಕಾಫಿನಾಡಿನಲ್ಲಿ ಒಮ್ಮೆಲೆ ಕ್ಯಾಮರಾ ಕಣ್ಣಿಗೆ ಬಿದ್ದ 39 ಕಾಡಾನೆಗಳ ಹಿಂಡು: ಹೇಗಿದೆ ನೋಡಿ ?

Edited By:

Updated on: Nov 25, 2026 | 3:28 PM

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ-ಬೇಲೂರು ಗಡಿಯಲ್ಲಿ ಒಮ್ಮೆಲೆ 39 ಕಾಡಾನೆಗಳ ಹಿಂಡು ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ತೋಟ ನಾಶದ ಭೀತಿಯಿಂದ ಆನೆಗಳನ್ನು ಬೇಲೂರಿಗೆ ವಾಪಸ್ ಓಡಿಸುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ. ಈಗಾಗಲೇ ಈ ಬಗ್ಗೆ ರಾಜ್ಯವನ್ನು ಅಲ್ಲಿನ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಆನೆಯ ಕಾರಣಕ್ಕೆ ರಾಜಕೀಯ ಗದ್ದಲ ಕೂಡ ಉಂಟಾಗಿದೆ. ಈ ಹೊತ್ತಿನಲ್ಲಿ ಆನೆಗಳ ಹಿಂಡು ಕ್ಯಾಮರದಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು, ನ.25: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೇಲೂರು-ಮೂಡಿಗೆರೆ ಗಡಿಭಾಗದಲ್ಲಿ ಒಮ್ಮೆಲೆ 39 ಕಾಡಾನೆಗಳ ಬೃಹತ್ ಹಿಂಡು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಮರಿ ಆನೆಗಳನ್ನು ಮಧ್ಯದಲ್ಲಿ ಬಿಟ್ಟುಕೊಂಡು, ಸುತ್ತಲೂ ದೊಡ್ಡ ಆನೆಗಳು ರಕ್ಷಣಾ ಕೋಟೆ ನಿರ್ಮಿಸಿ ಸಾಗುತ್ತಿರುವ ಮೂಕ ಪ್ರಪಂಚದ ಮಾತೃ ವಾತ್ಸಲ್ಯದ ಅಪರೂಪದ ದೃಶ್ಯ ಮನಮೋಹಕವಾಗಿದ್ದರೂ, ಇಷ್ಟು ದೊಡ್ಡ ಗಜಪಡೆಯನ್ನು ಕಂಡು ಮಲೆನಾಡಿನ ಬೆಳೆಗಾರರು ಬೆಚ್ಚಿಬಿದ್ದಿದ್ದಾರೆ. ಬೇಲೂರು ಭಾಗದಿಂದ ಬಂದಿರುವ ಸುಮಾರು 39 ಕಾಡಾನೆಗಳ ಹಿಂಡು ಪ್ರಸ್ತುತ ಬೇಲೂರು-ಮೂಡಿಗೆರೆ ಗಡಿಯಲ್ಲಿ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಬೀಡುಬಿಟ್ಟಿದೆ. ಈ ಬೃಹತ್ ಹಿಂಡು ಒಟ್ಟಾಗಿ ಸಾಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಿಂಡಿನಲ್ಲಿರುವ ಪುಟ್ಟ ಮರಿಗಳಿಗೆ ಯಾವುದೇ ತೊಂದರೆಯಾಗದಂತೆ, ದೊಡ್ಡ ಆನೆಗಳು ಮರಿಗಳನ್ನು ಮಧ್ಯದಲ್ಲಿಟ್ಟುಕೊಂಡು ಸುತ್ತಲೂ ಕಾವಲು ಕಾಯುತ್ತಾ ಹೆಜ್ಜೆ ಹಾಕುತ್ತಿರುವ ದೃಶ್ಯ ವನ್ಯಜೀವಿ ಪ್ರೇಮಿಗಳ ಗಮನ ಸೆಳೆದಿದೆ. ಹಿಂಡಿನಲ್ಲಿರುವ ಪುಟ್ಟ ಮರಿಗಳಿಗೆ ಯಾವುದೇ ತೊಂದರೆಯಾಗದಂತೆ, ದೊಡ್ಡ ಆನೆಗಳು ಮರಿಗಳನ್ನು ಮಧ್ಯದಲ್ಲಿಟ್ಟುಕೊಂಡು ಸುತ್ತಲೂ ಕಾವಲು ಕಾಯುತ್ತಾ ಹೆಜ್ಜೆ ಹಾಕುತ್ತಿರುವ ದೃಶ್ಯ ವನ್ಯಜೀವಿ ಪ್ರೇಮಿಗಳ ಗಮನ ಸೆಳೆದಿದೆ. ಮಲೆನಾಡಿನ ಜನರು ಹಾಗೂ ಬೆಳೆಗಾರರ ಪ್ರಾಣ ಮತ್ತು ಬೆಳೆ ರಕ್ಷಣೆಗಾಗಿ ಅರಣ್ಯ ಇಲಾಖೆ ತಕ್ಷಣವೇ ಕಾರ್ಯಾಚರಣೆ ನಡೆಸಿ, ಈ 39 ಕಾಡಾನೆಗಳ ಹಿಂಡನ್ನು ಮತ್ತೆ ಬೇಲೂರು ಭಾಗಕ್ಕೆ ವಾಪಸ್ ಓಡಿಸಬೇಕು ಎಂದು ಮಲೆನಾಡಿಗರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More