[lazy-load-videos-and-sticky-control id=”zlU1E1XYMik”]
ಚಿಕ್ಕಮಗಳೂರು: ಕಾಫಿನಾಡಿನ ಗಿರಿ ಪ್ರದೇಶದಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಸಿದ್ಧ ಕಲ್ಲತ್ತಿಗಿರಿ ಜಲಪಾತ ಉಕ್ಕಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಕಲ್ಲತ್ತಿಗಿರಿ ಅಥವಾ ಕಲ್ಲತ್ತಗಿರಿ ಜಲಪಾತ ಭಾರಿ ಮಳೆಯಿಂದಾಗಿ ಮೈದುಂಬಿ ಹರಿದಿದೆ.
ನಿನ್ನೆ, ಮಧ್ಯಾಹ್ನದ ವೇಳೆ ಮುಳ್ಳಯ್ಯನಗಿರಿ ಹಾಗೂ ದತ್ತ ಪೀಠ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕಲ್ಲತ್ತಿಗಿರಿ ಜಲಪಾತಕ್ಕೆ ಅತೀ ಹೆಚ್ಚು ನೀರು ಹರಿದು ಬಂದಿದೆ.