AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಕಗ್ಗತಲ ರಾತ್ರಿ ಹೆಡ್‌ಲೈಟ್ ಇಲ್ಲದೆ ಸಂಚರಿಸಿದ ಕೆಎಸ್ಆರ್​ಟಿಸಿ ಬಸ್! ಪ್ರಯಾಣಿಕರಲ್ಲಿ ಆತಂಕ

ಚಿಕ್ಕಮಗಳೂರು: ಕಗ್ಗತಲ ರಾತ್ರಿ ಹೆಡ್‌ಲೈಟ್ ಇಲ್ಲದೆ ಸಂಚರಿಸಿದ ಕೆಎಸ್ಆರ್​ಟಿಸಿ ಬಸ್! ಪ್ರಯಾಣಿಕರಲ್ಲಿ ಆತಂಕ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Oct 02, 2026 | 10:51 AM

Share

ಚಿಕ್ಕಮಗಳೂರಿನಲ್ಲಿ ಹೆಡ್‌ಲೈಟ್ ಇಲ್ಲದೆ KSRTC ಬಸ್ ಸಂಚರಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. KGF ಡಿಪೋಗೆ ಸೇರಿದ ಬಸ್ ಶೃಂಗೇರಿಯಿಂದ ಚಿಕ್ಕಮಗಳೂರುವರೆಗೆ ರಾತ್ರಿ ವೇಳೆ ಹೆಡ್‌ಲೈಟ್ ಇಲ್ಲದೆ ಸಂಚರಿಸಿದ್ದು, ಮೊಬೈಲ್‌ ಲೈಟ್‌ನ ಸಹಾಯದಿಂದ ಚಾಲಕ ಬಸ್‌ ಓಡಿಸಿದ್ದಾರೆ ಎಂದು ಪ್ರಯಾಣಿಕರು ಹೆಳಿದ್ದಾರೆ. ಬೈಕ್ ಸವಾರರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ಈಗ ವೈರಲ್ ಆಗುತ್ತಿದೆ.

ಚಿಕ್ಕಮಗಳೂರು, ಅಕ್ಟೋಬರ್ 2: ಹೆಡ್‌ಲೈಟ್ ಇಲ್ಲದೆ ಕೆಎಸ್ಆರ್​ಟಿಸಿ ಬಸ್ ಸಂಚರಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಪಾಯಕಾರಿ ತಿರುವುಗಳು ಹಾಗೂ ಕಿರಿದಾದ ರಸ್ತೆಯಲ್ಲೂ ಹೆಡ್‌ಲೈಟ್ ಇಲ್ಲದೆ ಬಸ್ ಸಂಚರಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಕೆಜಿಎಫ್ ಡಿಪೋಗೆ ಸೇರಿದ KA 40 F 1400 ನೋಂದಣಿ ಸಂಖ್ಯೆಯ ಬಸ್ ಕೆಜಿಎಫ್​​ನಿಂದ ಶೃಂಗೇರಿಗೆ ಬಂದಿತ್ತು. ಬಳಿಕ ಶೃಂಗೇರಿಯಿಂದ ಚಿಕ್ಕಮಗಳೂರು ಕಡೆಗೆ ರಾತ್ರಿ 10.30ರ ಸುಮಾರಿಗೆ ಸಂಚಾರ ಆರಂಭಿಸಿದೆ. ಶೃಂಗೇರಿಯಿಂದ ಚಿಕ್ಕಮಗಳೂರುವರೆಗೂ ಬಸ್ ಹೆಡ್‌ಲೈಟ್ ಇಲ್ಲದೆ ಸಂಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಅಪಾಯಕಾರಿ ತಿರುವುಗಳು ಹಾಗೂ ಕಿರಿದಾದ ರಸ್ತೆಯಲ್ಲಿ ಹೆಡ್‌ಲೈಟ್ ಇಲ್ಲದೆ ಬಸ್ ಚಲಾಯಿಸುವುದು ಚಾಲಕ ಮತ್ತು ಪ್ರಯಾಣಿಕರಿಗೆ ಆತಂಕದ ಪರಿಸ್ಥಿತಿ ನಿರ್ಮಿಸಿತ್ತು. ಮಾರ್ಗಮಧ್ಯೆ ಹೆಡ್‌ಲೈಟ್ ಕೆಟ್ಟುಹೋಗಿದ್ದು, ಬಳಿಕ ಮೊಬೈಲ್‌ ಲೈಟ್‌ನ ಸಹಾಯದಿಂದ ಚಾಲಕ ಬಸ್‌ ಓಡಿಸಿದ್ದಾರೆ . ಸುಮಾರು ರಾತ್ರಿ 11.30ಕ್ಕೆ ಬಸ್ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣ ತಲುಪಿದೆ. ಹೆಡ್‌ಲೈಟ್ ಇಲ್ಲದ ಸ್ಥಿತಿಯಲ್ಲೇ ಬಸ್ ಸಂಚರಿಸಿರುವುದಕ್ಕೆ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಸ್ ಹೆಡ್​ಲೈಟ್ ಇಲ್ಲದೆ ಸಂಚರಿಸುತ್ತಿರುವ ದೃಶ್ಯವನ್ನು ಬೈಕ್ ಸವಾರರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More