ಸಮೀಕ್ಷೆಗೆಂದು ಬಂದ ಶಿಕ್ಷಕಿಗೆ ಧಮ್ಕಿ ಹಾಕಿದ ಮೆಸ್ಕಾಂ ಇಂಜಿನಿಯರ್‌

Updated on: Sep 29, 2025 | 7:32 PM

ರಾಜ್ಯಾದ್ಯಂತ ಜಾತಿ ಗಣತಿ ನಡೆಯುತ್ತಿದೆ. ಮನೆ ಮನೆಗೆ ಸಮೀಕ್ಷೆ ನಡೆಸಲು ಹೋಗ್ತಿರುವ ಶಿಕ್ಷಕರು ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಮೊನ್ನೆ ಶಿಕ್ಷಕಿಯೊಬ್ಬರಿಗೆ ನಾಯಿ ಕಚ್ಚಿದಂತಹ ಘಟನೆ ನಡೆದಿತ್ತು. ಇದೀಗ ಚಿಕ್ಕಮಗಳೂರಿನಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಗೆ ಮೆಸ್ಕಾಂ ಇಂಜಿನಿಯರ್‌ ಧಮ್ಕಿ ಹಾಕಿದಂತಹ ಘಟನೆ ನಡೆದಿದೆ. ಮಕ್ಕಳ ಬಳಿ ಪ್ರಶ್ನೆ ಕೇಳ್ತಿಯಾ ಎಂದು ಇಂಜಿನಿಯರ್‌ ರೂಪಾ ಮತ್ತು ಆಕೆಯ ಪತಿ ಶಿಕ್ಷಕಿಗೆ ಅವಾಜ್‌ ಹಾಕಿದ್ದಾರೆ.

ಚಿಕ್ಕಮಗಳೂರು,  ಸೆಪ್ಟೆಂಬರ್‌ 29:  ರಾಜ್ಯದಾಂತ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ (Karnataka Caste Census)ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆಗೆಂದು ಹೋದಂತಹ ಶಿಕ್ಷಕರಿಗೆ ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆ, ಸೂಕ್ತ ಬೆಂಬಲದ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಲೇ ಇವೆ. ಮೊನ್ನೆಯಷ್ಟೇ ಜಾತಿ ಗಣತಿಗೆಂದು ಮನೆ ಬಳಿ ಹೋದ ಶಿಕ್ಷಕಿಯ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿದ ಘಟನೆ ನಡೆದಿದಿತ್ತು. ಇದೀಗ ಚಿಕ್ಕಮಗಳೂರಿನ ದೋಣಿ ಕಣದಲ್ಲಿ ಸಮೀಕ್ಷೆಗೆಂದು ಬಂದ ಶಿಕ್ಷಕಿಗೆ ಮೆಸ್ಕಾಂ ಇಂಜಿನಿಯರ್‌ ರೂಪಾ  ಮತ್ತು ಆಕೆಯ ಪತಿ ಧಮ್ಕಿ ಹಾಕಿದಂತಹ ಘಟನೆ ನಡೆದಿದೆ. ಕೋರ್ಟ್‌ ಆರ್ಡರ್‌ ಆಗಿದ್ರೂ, ಬಲವಂತವಾಗಿ ನನ್ನ ಮಗಳ ಬಳಿ ಪ್ರಶ್ನೆ ಕೇಳ್ತಿಯಾ, ಮಕ್ಕಳತ್ರ ಬಂದು ಗಲಾಟೆ ಮಾಡ್ತಿಯಾ, ಯಾವ ಥರ್ಡ್‌ ಕ್ಲಾಸ್‌ಗಳೆಲ್ಲಾ ಬರ್ತಾವೆ ಅಂತ ಶಿಕ್ಷಕಿಗೆ ಅವಾಜ್‌ ಹಾಕಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ