ಶಿವಮೊಗ್ಗ ದಸರಾ; ಇಡ್ಲಿ, ಬಾಳೆಹಣ್ಣು ತಿನ್ನೋ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ ಜನ
ನಾಡಿನೆಲ್ಲೆಡೆ ದಸರಾ ಸಂಭ್ರಮ ನಡೆಯುತ್ತಿದೆ. ಅದರಂತೆ ಶಿವಮೊಗ್ಗದಲ್ಲೂ ಬಹಳ ಅದ್ದೂರಿಯಾಗಿ ದಸರಾ ಉತ್ಸವ ನಡೆಯುತ್ತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ಸಾರ್ವಜನಿಕರಿಗಾಗಿ ಇಡ್ಲಿ ಮತ್ತು ಬಾಳೆ ಹಣ್ಣು ತಿನ್ನೋ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಒಂದು ಕಾಂಪಿಟೇಷನ್‌ನಲ್ಲಿ ಭಾಗವಹಿಸಿ ಜನ ಸಂಭ್ರಮಿಸಿದ್ದಾರೆ.
ಶಿವಮೊಗ್ಗ, ಸೆಪ್ಟೆಂಬರ್ 29: ಶಿವಮೊಗ್ಗದಲ್ಲಿ ದಸರಾ (Shivamogga Dasara) ಸಂಭ್ರಮ ಬಲು ಜೋರಾಗಿದ್ದು, ಹತ್ತು ಹಲವು ಕಾರ್ಯಕ್ರಮಗಳನ್ನು ಈ ಒಂದು ದಸರಾದಲ್ಲಿ ಆಯೋಜಿಸಲಾಗಿದೆ. ಜನರು ಈ ಕಾರ್ಯಕ್ರಮಗಳಲ್ಲಿ ಖುಷಿ ಖುಷಿಯಾಗಿ ಭಾಗವಹಿಸುತ್ತಿದ್ದಾರೆ. ಅದೇ ರೀತಿ ಇಂದು ಶಿವಮೊಗ್ಗ ದಸರಾ ಅಂಗವಾಗಿ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಬಾಳೆಹಣ್ಣು ಮತ್ತು ಇಡ್ಲಿ ತಿನ್ನೋ ಸ್ಪರ್ಧೆಯನ್ನುಏರ್ಪಡಿಸಲಾಗಿತ್ತು, ಜನರೆಲ್ಲಾ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ. ಅದರಲ್ಲಿ ಒಬ್ಬ ಮಹಿಳೆ 12 ಬಾಳೆಹಣ್ಣು ತಿಂದು ಮೊದಲ ಬಹುಮಾನವನ್ನು ತನ್ನಾಗಿಸಿಕೊಂಡಿದ್ದು, ಪ್ರತಿವರ್ಷ ಕೂಡ ನನಗೆ ಈ ಸ್ಪರ್ಧೆಯಲ್ಲಿ ನಾಗು ಬಹುಮಾನ ಗೆಲ್ಲುತ್ತಲೇ ಬಂದಿದ್ದೇನೆ ಎಂದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

