ಜಾತಿ ಗಣತಿಗೆ ಹೋಗಿದ್ದ ಶಿಕ್ಷಕಿ ಮೇಲೆ ನಾಯಿ ದಾಳಿ
ಕರ್ನಾಟಕದ ಎಲ್ಲಾ ನಾಗರಿಕರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗಳ ಬಗೆಗಿನ ಸಮಗ್ರ ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರ ಜಾತಿ ಗಣತಿ ಸಮೀಕ್ಷೆ ಆರಂಭಿಸಿದೆ. ಗಣತಿಗಾಗಿ ನೇಮಕ ಮಾಡಿರುವಂತಹ ಶಿಕ್ಷಕರೆಲ್ಲರೂ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸುತ್ತಿದ್ದಾರೆ. ಇದೇ ರೀತಿ ಜಾತಿ ಗಣತಿಗೆ ಹೋಗಿದ್ದ ಸಂದರ್ಭದಲ್ಲಿ ಶಿಕ್ಷಕಿಯ ಮೇಲೆ ಜರ್ಮನ್ ಶೆಫರ್ಡ್ ಸಾಕು ನಾಯಿ ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 28: ಕರ್ನಾಟಕ ರಾಜ್ಯದಾಂತ್ಯದ ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ(Karnataka Caste Census) ಸಮೀಕ್ಷೆ ನಡೆಯುತ್ತಿದೆ. ಈ ಒಂದು ಸಮೀಕ್ಷೆಯಲ್ಲಿ ಭಾಗವಹಿಸಿದಂತಹ ಶಿಕ್ಷಕರಿಗೆ ಸರ್ವರ್ ಸಮಸ್ಯೆ, ತಾಂತ್ರಿಕ ತೊಂದರೆಗಳು, ಸೂಕ್ತ ಬೆಂಬಲದ ಕೊರತೆ ಸೇರಿದಂತೆ ಒಂದಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಸಮೀಕ್ಷೆ ನಡೆಸಲು ಮನೆಯೊಂದರ ಬಳಿ ಹೋದ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರಿಗೆ ಸಾಕು ನಾಯಿ ದಾಳಿ ನಡೆಸಿದೆ. ಚಿಕ್ಕಾಬಳ್ಳಾಪುರ ನಗರದ ತಿಮ್ಮಕ್ಕ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಪಿಡಿಒ ನಾರಾಯಣಸ್ವಾಮಿ ಎಂಬವರ ಮನೆಗೆ ಜಾತಿ ಗಣತಿಗೆ ಹೋಗಿದ್ದ ಹೋಗಿದ್ದ ಕೂತನಹಳ್ಳಿ ಶಾಲೆ ಶಿಕ್ಷಕಿ ರಂಜಿನಿ ಮೇಲೆ ಜರ್ಮನ್ ಶೆಫರ್ಡ್ ಸಾಕು ನಾಯಿ ಅಟ್ಯಾಕ್ ಮಾಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

