ಮನ್ ಕಿ ಬಾತ್‌ನಲ್ಲಿ ಭೈರಪ್ಪರನ್ನ ಸ್ಮರಿಸಿದ ಮೋದಿ: ಅವರ ಕೃತಿಗಳನ್ನ ಓದುವಂತೆ ಕರೆ
ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ನಿಧನಕ್ಕೆ ಭಾವುಕ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತ ಒಬ್ಬ ಶ್ರೇಷ್ಠ ವಿಚಾರವಾದಿಯನ್ನು ಕಳೆದುಕೊಂಡಿದೆ. ಭೈರಪ್ಪರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಪ್ರಧಾನಿ, ಭೈರಪ್ಪರ ಪುಸ್ತಕಗಳನ್ನು ಓದುವಂತೆ ಜನರಿಗೆ ಕರೆ ನೀಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 28: ಇಂದಿನ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಸ್.ಎಲ್.ಭೈರಪ್ಪರ ಸ್ಮರಿಸಿದರು. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ ಮೋದಿ, ನಾನು ಮತ್ತು ನನ್ನ ದೇಶ ವಿಚಾರವಾದಿ, ಚಿಂತಕನನ್ನು ಕಳೆದುಕೊಂಡಿದೆ. ನಾನು ಎಸ್.ಎಲ್.ಭೈರಪ್ಪರ ಜತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವಾರು ವಿಚಾರಗಳ ಮಂಥನ ಮಾಡಿದ್ದೇವು. ಎಸ್.ಎಲ್.ಭೈರಪ್ಪರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
