ವಿಜಯ್ ನೋಡಲು ಹೋಗಿ ದುರಂತ ಅಂತ್ಯ ಕಂಡ ಒಂದೇ ಊರಿನ ಐವರು ಮಂದಿ
ತಮಿಳುನಾಡಿನ ಕರೂರ್‌ನಲ್ಲಿ ಶನಿವಾರ (ಸೆ.27) ನಟ-ರಾಜಕಾರಣಿ ದಳಪತಿ ವಿಜಯ್ ಅವರ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಈ ಒಂದು ದುರ್ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇನ್ನೂ ನಟ ವಿಜಯ್ ಅವರನ್ನು ನೋಡಲು ಒಂದೇ ಊರಿನ ಐವರು ಮಂದಿ ಈ ಒಂದು ದುರ್ಘಟನೆಯಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ತಮಿಳುನಾಡು, ಸೆಪ್ಟೆಂಬರ್ 28: ತಮಿಳುನಾಡಿನ ಕರೂರ್‌ನಲ್ಲಿ ಶನಿವಾರ (ಸೆ.27) ಸಂಜೆ ನಟ-ರಾಜಕಾರಣಿ ವಿಜಯ್ (Vijay) ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ನಟನನ್ನು ಕಣ್ತುಂಬಿಕೊಳ್ಳಲು ಈ ಒಂದು ರ‍್ಯಾಲಿಯಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಭಾಗವಹಿಸಿದ್ದು, ಸಣ್ಣ ಜಾಗದಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದ ಪರಿಣಾಮ ಕಾಲ್ತುಳಿತ ಸಂಭವಿಸಿದ್ದು, ಈ ಭೀಕರ ದುರಂತದಲ್ಲಿ 9 ಮಕ್ಕಳು, 17 ಮಹಿಳೆಯರು ಮತ್ತು 13 ಮಂದಿ ಪುರುಷರು ಸೇರಿದಂತೆ ಒಟ್ಟು 39 ಜನ ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಇನ್ನೂ ತಮ್ಮ ಕೂಲಿ ಕೆಲಸವನ್ನೆಲ್ಲಾ ಪಕ್ಕಕ್ಕಿಟ್ಟು ತಮ್ಮ ನೆಚ್ಚಿನ ನಟನನ್ನು ನೋಡಲು ಬಂದ ಒಂದೇ ಊರಿನ ಐವರು ಮಂದಿ ಈ ಭೀಕರ ಕಾಲ್ತುಳಿತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

