AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ನುಗ್ಗಿದ ಕಾಗಿಣಾ ನದಿ ನೀರು: ಹಸುಗೂಸು ಹಿಡಿದು ಮಾಳಿಗೆಯೇರಿ ಕುಂತ ಮಹಿಳೆ

ಮನೆಗೆ ನುಗ್ಗಿದ ಕಾಗಿಣಾ ನದಿ ನೀರು: ಹಸುಗೂಸು ಹಿಡಿದು ಮಾಳಿಗೆಯೇರಿ ಕುಂತ ಮಹಿಳೆ

ಭಾವನಾ ಹೆಗಡೆ
|

Updated on: Sep 28, 2025 | 4:41 PM

Share

ಕಲಬುರಗಿಯಲ್ಲಿ ನಿರಂತರ ಮಳೆಯಿಂದ ಜನರ ಬದುಕು ಅಸ್ತವ್ಯಸ್ತವಾಗಿದೆ. ಕಾಣಿಗಾ ನದಿ ಉಗ್ರ ರೂಪ ತಾಳಿ ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ. ಮನೆಗಳಿಗಳಿಗೆಲ್ಲಾ ನೀರು ನುಗ್ಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಸಮಖೇಡ ತಾಂಡಾದ ಶೋಭಾ ಎಂಬ ಮಹಿಳೆ ತನ್ನ ಕೇವಲ 2 ತಿಂಗಳ ಮಗುವನ್ನು ಮಡಿಲಲ್ಲಿ ಹಿಡಿದು ಮನೆಯ ಮಾಳಿಗೆ ಮೇಲೆ ಕುಳಿತಿರುವ ದೃಶ್ಯ ಹೃದಯ ಕಲುಕುವಂತಿದೆ.

ಕಲಬುರಗಿ, ಸೆಪ್ಟೆಂಬರ್ 28:  ಕಲಬುರಗಿಯಲ್ಲಿ ನಿರತಂತವಾಗಿ ಸುರಿದ ಮಳೆಗೆ ಜನರ ಬದುಕು ಮುರಾಬಟ್ಟೆಯಾಗಿದೆ. ಕಾಣಿಗಾ ನದಿ ಅಬ್ಬರಕ್ಕೆ ಮನೆಯೆಲ್ಲವೂ ಕೊಚ್ಚಿಕೊಂಡು ಹೋಗಿದೆ. ಸಮಖೇಡ ತಾಂಡಾ ನಿವಾಸಿ ಶೋಭಾ ಎನ್ನುವ ಮಹಿಳೆಯ ಸ್ಥಿತಿಯಂತೂ ಕರುಣಾಜನಕವಾಗಿದೆ. ಮನೆಗೆ ನೀರು ನುಗ್ಗಿದ ಪರಿಣಾಮವಾಗಿ  ಆಕೆ ತನ್ನ 2 ತಿಂಗಳ ಮಗುವನ್ನು ಮಡಿಲಲ್ಲಿಟ್ಟುಕೊಂಡು ಮಾಳಿಗೆ ಮೇಲೆ ಕುಳಿತ ದೃಶ್ಯ ಕರುಳು ಕಿವುಚುವಂತಿದೆ. ಈ ವೀಡಿಯೋ ನೋಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.