ಚಿಕ್ಕಮಗಳೂರು: ಸಿ.ಟಿ.ರವಿಗೆ ಶಾಕ್, ಬಿಜೆಪಿಗೆ ಗುಡ್ಬೈ ಹೇಳಿದ ತಮ್ಮಯ್ಯ
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿಗೆ (CT Ravi) ಸ್ವ ಕ್ಷೇತ್ರದಲ್ಲಿ ಆಘಾತ ಎದುರಾಗಿದೆ. ರವಿ ಅವರ ಆಪ್ತ ಎಚ್.ಡಿ. ತಮ್ಮಯ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿಗೆ (CT Ravi) ಸ್ವ ಕ್ಷೇತ್ರದಲ್ಲಿ ಆಘಾತ ಎದುರಾಗಿದೆ. ರವಿ ಅವರ ಆಪ್ತ ಎಚ್.ಡಿ. ತಮ್ಮಯ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಚುನಾವಣೆಗೂ ಮುನ್ನ ರವಿ ಅವರಿಗೆ ಆಘಾತ ಎದುರಾಗಿದೆ. ತಮ್ಮಯ್ಯ ಅವರು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಕಾರಣ ತಮ್ಮಯ್ಯ ನಿರ್ಗಮನ ರವಿಗೆ ಸಂಕಷ್ಟ ತಂದೊಡ್ಡಬಹುದು ಎನ್ನಲಾಗಿದೆ.