ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ

Edited By:

Updated on: Apr 17, 2025 | 10:28 AM

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ‌ ಮಾಕೋನಹಳ್ಳಿ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಾಡಾನೆ ದಾಂಧಲೆ ನಡೆಸಿದೆ. ಮನೆ ಹಿಂಭಾಗದ ಕಟ್ಟಡ, ದನದ ಕೊಟ್ಟಿಗೆಯನ್ನು ಕಾಡಾನೆ ಉಡೀಸ್ ಮಾಡಿದೆ. ಅಷ್ಟೇ ಅಲ್ಲದೆ, ತೋಟವನ್ನೂ ನಾಶಪಡಿಸಿವೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಚಿಕ್ಕಮಗಳೂರು, ಏಪ್ರಿಲ್ 17: ಮೂಡಿಗೆರೆ ತಾಲೂಕಿನ‌ ಮಾಕೋನಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದೆ. ಕಾಡಾನೆಗಳು ಮನೆಯೊಂದರ ಬಳಿ ಬಂದು ಮನೆ ಮುಂದೆ ಹಾಕಿದ್ದ ಶೆಡ್ ಪುಡಿಪುಡಿ ಮಾಡಿವೆ. ದನದ ಕೊಟ್ಟಿಗೆ, ಮನೆ ಹಿಂಭಾಗದ ಕಟ್ಟಡ ಉಡೀಸ್ ಮಾಡಿವೆ. ಬಾಳೆ, ಕಾಫಿ, ಅಡಕೆ ತೋಟ‌ವನ್ನು ಕಾಡಾನೆಗಳು ಸಂಪೂರ್ಣ ನಾಶ ಮಾಡಿವೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ 42 ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ಮಾಡುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ