ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಕಾಂಗ್ರೆಸ್ ಸರ್ಕಾರದ ಜಾತಿ ಗಣತಿ ವಿರುದ್ಧ ಮೈಸೂರಿನಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ಟಿವಿ9 ಜತೆ ಪ್ರತಿಕ್ರಿಯಿಸಿರುವ ನಾಗರಿಕರು, ಜಾತಿ ಗಣತಿ ಅಗತ್ಯ ಇಲ್ಲ. ನಮ್ಮ ಮನೆಗೆ ಯಾರೂ ಬಂದಿಲ್ಲ. ಸುಮ್ಮನೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ.
ಮೈಸೂರು, ಏಪ್ರಿಲ್ 17: ಜಾತಿ ಗಣತಿಯಿಂದ ಅನನುಕೂಲವೇ ಹೆಚ್ಚು. ಆಧುನಿಕ ಯುಗದಲ್ಲಿ ಜಾತಿ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ ಎಂದು ಮೈಸೂರಿನಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಜಾತಿ ಗಣತಿ ಸರಿಯಾಗಿ ಆಗಿಲ್ಲ. ನಮ್ಮ ಮನೆಗೆ ಗಣತಿಗೆ ಬಂದೇ ಇಲ್ಲ ಎಂದು ಇನ್ನು ಕೆಲವರು ಆರೋಪಿಸಿದ್ದಾರೆ. ಸರ್ಕಾರದ ವಿರುದ್ಧ ಜನ ಏನೇನಂದರು ಎಂಬುದನ್ನು ಇಲ್ಲಿರುವ ವಿಡಿಯೋದಲ್ಲಿ ನೋಡಿ.
Latest Videos