ಲಾರಿ ಮುಷ್ಕರದಿಂದ ಆಗುತ್ತಿರುವ ಸಮಸ್ಯೆಗಳನ್ನು ಲಾರಿ ಮಾಲೀಕರೂ ಆಗಿರುವ ರಾಯಚೂರಿನ ರೈತ ವಿವರಿಸುತ್ತಾರೆ
ರಾಯಚೂರು ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವುದರಿಂದ ಜನರಿಗೆ ಮಾಹಿತಿಯ ಕೊರತೆ ಇದೆ, ಮಷ್ಕರಗಳಿಂದ ರೈತಾಪಿ ಸಮುದಾಯ ಹೆಚ್ಚು ತೊಂದರೆಗೊಳಗಾಗುತ್ತದೆ, ಲಾರಿ ಮುಷ್ಕರ ನಡೆಯುತ್ತಿರುವ ವಿಷಯ ಜಿಲ್ಲೆಯ ಬಹಳಷ್ಟು ರೈತರಿಗೆ ಗೊತ್ತಿಲ್ಲ, ಅವರು ಹೇಗೋ ತಮ್ಮ ಬೆಳೆಯನ್ನು ಎಪಿಎಂಸಿಗೆ ತಂದರೂ ಮಂಡಿಯವರು ಖರೀದಿಗೆ ಹಿಂದೇಟು ಹಾಕುತ್ತಾರೆ ಎಂದು ನಾಗಭೂಷಣ ಹೇಳುತ್ತಾರೆ.
ರಾಯಚೂರು, ಏಪ್ರಿಲ್ 17: ಲಾರಿ ಮುಷ್ಕರದಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ ಅನ್ನೊದನ್ನು ಎರಡು ಲಾರಿಗಳ ಮಾಲೀಕನಾಗಿರುವ ಜೊತೆಗೆ ರೈತರೂ ಆಗಿರುವ ರಾಯಚೂರಿನ ನಾಗಭೂಷಣ (Nagabhushana from R) ಹೇಳಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು, ಲಾರಿಗಳನ್ನು ಬ್ಯಾಂಕ್ ನಲ್ಲಿ ಸಾಲ ಮಾಡಿ ಖರೀದಿಸಿದ ಕಾರಣ ಸಾಲದ ಮಾಸಿಕ ಕಂತು ಕಟ್ಟಲಾಗದು, ಬ್ಯಾಂಕ್ನವರು ಬಂದು ಲಾರಿಯನ್ನು ಸೀಜ್ ಮಾಡುತ್ತಾರೆ ಎಂದು ಹೇಳುತ್ತಾರೆ. ಇದು ರೈತರು ಬೆಳೆದ ಫಸಲು ಮಾರುಕಟ್ಟೆಗೆ, ಎಪಿಎಂಸಿಗೆ ಬರುವ ಸಮಯ, ಟ್ರಾನ್ಸ್ಪೊರ್ಟ್ ಮಾಡಲು ಲಾರಿಗಳಿಲ್ಲದಿದ್ದರೆ ಅವರೆನೋ ಚಿಕ್ಕಪುಟ್ಟ ಗೂಡ್ಸ್ ಕ್ಯಾರಿಯರ್ ಗಳ ಮೂಲಕ ಮಾಲನ್ನು ಎಪಿಎಂಸಿ ತರಬಹುದು, ಅದರೆ ವ್ಯಾಪಾರಸ್ಥರು ಖರೀದಿಗೆ ಅಂತ ಇಲ್ಲಿಗೆ ಬರಲ್ಲ, ಎಪಿಎಂಸಿ ಬಂದ್ ಮಾಡಬೇಕಾಗುತ್ತದೆ ಎಂದು ನಾಗಭೂಷಣ ಹೇಳುತ್ತಾರೆ.
ಇದನ್ನೂ ಓದಿ: ಲಾರಿ ಮುಷ್ಕರ: ಇಂದಿನಿಂದ ಮತ್ತಷ್ಟು ತೀವ್ರ ಹೋರಾಟ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
