ನಟ ಯಶ್ ನೀಡಿದ ಬೆಂಬಲವನ್ನು ನೆನೆದ ‘ಉಪಾಧ್ಯಕ್ಷ’ ಚಿಕ್ಕಣ್ಣ
Yash: ಮೊದಲ ಬಾರಿಗೆ ಚಿಕ್ಕಣ್ಣ ನಾಯಕನಾಗಿ ನಟಿಸಿದ್ದ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಈ ಸಿನಿಮಾಕ್ಕೆ ಯಶ್ ನೀಡಿದ ಬೆಂಬಲವನ್ನು ಚಿಕ್ಕಣ್ಣ ನೆನಪಿಸಿಕೊಂಡು ಧನ್ಯವಾದ ಹೇಳಿದ್ದಾರೆ.
ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ (Upadyaksha) ಸಿನಿಮಾ ಹಿಟ್ ಎನಿಸಿಕೊಂಡಿದೆ. ಆ ಮೂಲಕ ಮೊದಲ ಪ್ರಯತ್ನದಲ್ಲಿಯೇ ಚಿಕ್ಕಣ್ಣ ಸಿಕ್ಸರ್ ಹೊಡೆದಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾಕ್ಕೆ ಚಿತ್ರರಂಗದ ಗಣ್ಯಾತಿಗಣ್ಯರು ಬೆಂಬಲ ನೀಡಿದ್ದರು. ‘ಉಪಾಧ್ಯಕ್ಷ’ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ನಟ ಚಿಕ್ಕಣ್ಣ ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ನಟ ಯಶ್ ನೀಡಿದ ಬೆಂಬಲದ ಬಗ್ಗೆ ಮಾತನಾಡಿದ ಚಿಕ್ಕಣ್ಣ, ‘ಭಾಯ್, ಯಾರ ಕೈಗೂ ಸಿಗಲ್ಲ. ಆದರೆ ನಮಗೆ ಬೆಂಬಲ ನೀಡಿದರು. ಸಿನಿಮಾದ ಚಿತ್ರಕತೆ ಹಂತದಿಂದಲೂ ಜೊತೆಗಿದ್ದರು, ಕೆಲವು ಬದಲಾವಣೆಗಳನ್ನು ಸೂಚಿಸಿದರು. ಸಿನಿಮಾ ಬಿಡುಗಡೆ ದಿನ ಮನೆಗೆ ಕರೆಸಿ ಶುಭ ಹಾರೈಸಿದರು’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

