ಗದ್ದೆಯಂತಾದ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ಮಾರುದ್ದ ತಳ್ಳಿಕೊಂಡು ಹೋದ ನಂತರವೇ ಈ ಮಕ್ಕಳಿಗೆ ವಿದ್ಯೆ ಸಿಗೋದು!
ಶಿಕ್ಷಣಕ್ಕೆ ಮಹತ್ವ, ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು, ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತೇವೆ ಅಂತ ಅಧಿಕಾರಕ್ಕೆ ಬಂದ ನಂತರ ಎಲ್ಲ ಸರ್ಕಾರಗಳು ಹೇಳುತ್ತವೆ. ಆದರೆ ವಸ್ತುಸ್ಥಿತಿ ಮಾತ್ರ ದಶಕಗಳಿಂದ ಹಾಗೆಯೇ ಉಳಿದಿದೆ. ಶಾಲೆಗೆ ಹೋಗುವ ಚಿಕ್ಕಪುಟ್ಟ ಮಕ್ಕಳು ಕೆಸರಲ್ಲಿ ಆಟೋ ರಿಕ್ಷಾ ತಳ್ಳುವ ಪರಿಸ್ಥಿತಿ 21 ನೇ ಶತಮಾನದಲ್ಲೂ ನೋಡಬೇಕಾದ ಸ್ಥಿತಿ ನಮ್ಮಲ್ಲಿದೆಯಲ್ಲ ಸ್ವಾಮೀ?
ಉಡುಪಿ, ಜುಲೈ 18: ಶಾಲೆಗೆ ಹೋಗಬೇಕು, ವಿದ್ಯಾರ್ಜನೆ ಮಾಡಬೇಕು ಮತ್ತು ಬದುಕಲ್ಲಿ ಏನಾದರೂ ಸಾಧಿಸಬೇಕೆನ್ನುವ ಮಕ್ಕಳು ಮೊದಲು ಗದ್ದೆಯಂತಾಗಿರುವ ರಸ್ತೆಯಲ್ಲಿ ತಮ್ಮನ್ನು ಶಾಲೆಗೆ ಕರೆದೊಯ್ಯುವ ಆಟೋರಿಕ್ಷಾವನ್ನು ಬೆವರು ಸುರಿಸುತ್ತಾ ತಳ್ಳಬೇಕು, ದಣಿದ ದೇಹ, ಕೆಸರುಮಯವಾಗುವ ಸಮವಸ್ತ್ರಗಳೊಂದಿಗೆ ಶಾಲೆಯಲ್ಲಿ ಕೂತು ಶಿಕ್ಷಕರು ಹೇಳುವ ಪಾಠವನ್ನು ಕೇಳಿಸಿಕೊಳ್ಳಬೇಕು. ಜಿಲ್ಲೆಯ ಬೈಂದೂರು ತಾಲ್ಲೂಕಿನ ಚಾರ್ಸಾಲು ರಸ್ತೆ ಮೂಲಕ ಶಾಲೆಗೆ ಹೋಗುವ ಗೋಳಿಹೊಳೆ ಗ್ರಾಮದ ಮಕ್ಕಳಿಗೆ ಮಳೆಗಾಲದಲ್ಲಿ ಇದು ಪ್ರತಿನಿತ್ಯದ ಬವಣೆ. ಗ್ರಾಮಸ್ಥರು ಅಧಿಕಾರಿ ಮತ್ತು ಶಾಸಕರಿಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ