ಪ್ರಧಾನಿ ಮೋದಿಗೆ ಶುಭಾಶಯ ಕೋರಲು ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ವೇಷ ಧರಿಸಿ ರೋಡ್ ಶೋಗೆ ಆಗಮಿಸಿದ ಮಕ್ಕಳು
ಪ್ರಧಾನಿ ಮೋದಿ ರೋಡ್ ಶೋ ವೇಳೆ ಮಕ್ಕಳು ಕೂಡ, ಆದಿ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ, ಮಧ್ವಾಚಾರ್ಯರ ಸೇರಿದಂತೆ ಇನ್ನಿತರ ಮಹಾನುಭಾವರ ವೇಷ ಧರಿಸಿ ಪ್ರಧಾನಿ ಮೋದಿ ಅವರನ್ನು ನೋಡಲು ಸಾಲುಗಟ್ಟಿ ನಿಂತಿದ್ದರು.
ಬೆಂಗಳೂರು: ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು(ಮೇ.6) ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದು. ಈ ವೇಳೆ ರೋಡ್ ಶೋನಲ್ಲಿ ಹಲವು ಮಕ್ಕಳು ಐತಿಹಾಸಿಕ ವ್ಯಕ್ತಿಗಳ ವೇಷ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಮುಂದಾದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಧಾನಸಭೆ ಚುನಾವಣಾ ಪ್ರಚಾರದ ಭಾಗವಾಗಿ 26 ಕಿಲೋಮೀಟರ್ ರೋಡ್‌ಶೋವನ್ನ ನಡೆಸಿರುವ ಪ್ರಧಾನಿ ಮೋದಿಯವರು. ರೋಡ್‌ಶೋ ಅಂತ್ಯಗೊಳ್ಳಲಿರುವ ಮಲ್ಲೇಶ್ವರಂನಲ್ಲಿ ಮಕ್ಕಳು ಆದಿ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ, ಮಧ್ವಾಚಾರ್ಯರ, ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜರಂತೆ ವೇಷ ಧರಿಸಿ ಸಾಯಿಬಾಬಾ ಮಂದಿರದ ಮುಂದೆ ಮೋದಿಗಾಗಿ ಕಾಯುತ್ತಾ ನಿಂತಿದ್ದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos