ಎಸ್​ಪಿಜಿ ಭದ್ರತೆ ಬಗ್ಗೆ ತಿಳಿಯಲು ಬೆಂಗಳೂರಿನ ಪ್ರಧಾನಿ ಮೋದಿ ರೋಡ್​ ಶೋಗೆ ಬಂದ ವಿದೇಶಿ ಪೊಲೀಸರು

ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ಬಗ್ಗೆ ತಿಳಿಯಲು ಮಾರಿಷಸ್, ನೇಪಾಳ, ಭೂತಾನ್​ನಿಂದ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ.

ಎಸ್​ಪಿಜಿ ಭದ್ರತೆ ಬಗ್ಗೆ ತಿಳಿಯಲು ಬೆಂಗಳೂರಿನ ಪ್ರಧಾನಿ ಮೋದಿ ರೋಡ್​ ಶೋಗೆ ಬಂದ ವಿದೇಶಿ ಪೊಲೀಸರು
ಎಸ್​ಪಿಜಿ ಭದ್ರತೆ
Follow us
ವಿವೇಕ ಬಿರಾದಾರ
|

Updated on:May 06, 2023 | 1:09 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಭದ್ರತೆ ಬಗ್ಗೆ ತಿಳಿಯಲು ಮಾರಿಷಸ್ (Mauritius), ನೇಪಾಳ (Nepal), ಭೂತಾನ್​ನಿಂದ (Bhutan) ಪೊಲೀಸರು ಬೆಂಗಳೂರಿಗೆ (Bengaluru) ಆಗಮಿಸಿದ್ದಾರೆ. ಪ್ರಧಾನಿ ಮೋದಿಯವರ ಎಸ್​​ಪಿಜಿ ಭದ್ರತೆ, ರಕ್ಷಣೆ ಬಗ್ಗೆ ತರಬೇತಿ ಪಡೆಯಲು ವಿದೇಶಿ ಪೊಲೀಸರು ರ್ಯಾಲಿಗೆ ಆಗಮಿಸಿದ್ದಾರೆ. ನಗರದಲ್ಲಿ ಇಂದು (ಮೇ.06) ಪ್ರಧಾನಿ ಮೋದಿಯರ 26 ಕಿಮೀ ರ್ಯಾಲಿ ನಡೆಯಿತು. ಈ ಹಿನ್ನೆಲೆ ಭದ್ರತೆ ಸಂಬಂಧ ನಗರದಲ್ಲಿ 8 ಸಾವಿರ ಪೊಲೀಸರು ಕಾವಲಿಗಿದ್ದಾರೆ. ಅಲ್ಲದೇ ವಿಶೇಷವಾಗಿ ಪ್ರಧಾನಿ ಮೋದಿಯವರ ಅಂಗರಕ್ಷಕರಾಗಿ ಎಸ್​ಪಿಜಿ ಕಮಾಂಡ್​​ಗಳು ಇದ್ದಾರೆ. ಯಾರು ಇವರು ಎಸ್​ಪಿಜಿ ಕಮಾಂಡರ್ಸ್​​, ಹೇಗಿರುತ್ತದೆ ರಕ್ಷಣೆ ಇಲ್ಲಿದೆ

ಪ್ರಧಾನಿ ಎಲ್ಲೇ ಹೋಗಲಿ ಅವರನ್ನು ಸದಾ ಕಪ್ಪುಬಟ್ಟೆ ಧರಿಸಿಕೊಂಡು ಎಸ್​ಪಿಜಿ (Special Protection Group) ಕಮಾಂಡರ್ಸ್​​​ ಹಿಂಬಾಲಿಸುತ್ತಿರುತ್ತಾರೆ. ಇದು ಎಲ್ಲರೂ ಗಮನಿಸಿರುವ ವಿಷಯ. ಸದ್ಯ ಭಾರತದಲ್ಲಿ ಬಲಿಷ್ಠ ಮತ್ತು ಚಾಕಚಕ್ಯತೆ ಭದ್ರತೆ ಎಂದರೇ ಎಸ್​ಪಿಜಿ ಕಮಾಂಡರ್​​ಗಳದ್ದು. ಇವರಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ. ಈ ತಂಡದ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಗ್ಯಾಜೆಟ್ ಗಳು ಹಾಗೂ ವಾಹನಗಳು ಇವೆ. ಈ ತಂಡದಿಂದ ಒಂದೇ ಒಂದು ಸಣ್ಣ ತಪ್ಪು ಕೂಡ ನಡೆಯದಷ್ಟು ಎಚ್ಚರಿಕೆ ವಹಿಸಲಾಗುತ್ತದೆ. ಇವರನ್ನು ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಿಂದ (ಸಿಎಪಿಎಫ್) ನಿಯೋಜನೆ ಮೇಲೆ ಎಸ್ ಪಿಜಿಗೆ ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗುತ್ತದೆ.

ಎಸ್​ಪಿಜಿ ಅನುಸರಿಸುವ ಕ್ರಮಗಳೇನು

ಎಸ್​ಪಿಜಿ ಅಧಿಕಾರಿಗಳು ಅತ್ಯುನ್ನತ ಮಟ್ಟದ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ವೃತ್ತಿಪರತೆ, ಭದ್ರತೆ ಬಗ್ಗೆ ಅವರ ಆಳವಾದ ಜ್ಞಾನ, ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ಸಂಸ್ಕೃತಿ ಅದ್ಭುತ. ಇವರು ಅನುಸರಿಸುವ ರಕ್ಷಣಾ ಕ್ರಮಗಳೇ ವಿಶಿಷ್ಟ, ವಿಭಿನ್ನ ಹಾಗೂ ಹೊಸತನದಿಂದ ಕೂಡಿರುತ್ತವೆ. ಇವರ ಕಾರ್ಯ ನಿರ್ವಹಣೆ ವಿಧಾನ, ಅಧಿಕಾರಿಗಳ ನಾಯಕತ್ವ ಸೇರಿ ಇತರ ಗುಣಗಳ ಕಾರಣಕ್ಕೆ ಭದ್ರತಾ ಲೋಪದ ಪ್ರಮಾಣ ಸೊನ್ನೆಯಾಗಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋಗೆ ವಿಶೇಷವಾಗಿ ಆಗಮಿಸಿದ ವಿಶೇಷ ಚೇತನ

ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ವಾಹನಗಳು

ಎಸ್​ಪಿಜಿ ಸಿಬ್ಬಂದಿಗೆ ತರಬೇತಿ ನಿರಂತರವಾಗಿ ದೈಹಿಕ ಕ್ಷಮತೆ, ವಿಧ್ವಂಸಕ ಕೃತ್ಯ ತಡೆಗೆ ಪರಿಶೀಲನೆ, ಸಂವಹನ ಹಾಗೂ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ತರಬೇತಿ ನಡೆಯುತ್ತಲೇ ಇರುತ್ತದೆ. ಎಸ್​ಪಿಜಿ ಕಾಯ್ದೆ ಪ್ರಕಾರ, ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಎಸ್​ಪಿಜಿಗೆ ಅಗತ್ಯ ಇರುವ ಎಲ್ಲ ಸಹಕಾರ ನೀಡಲೇಬೇಕು. ಎಸ್ ಪಿಜಿ ಕಮ್ಯಾಂಡೋಗಳ ಬಳಿ ಅತ್ಯಾಧುನಿಕ ರೈಫಲ್ಸ್ ಗಳು ಇರುತ್ತವೆ. ಕತ್ತಲಲ್ಲೂ ಸ್ಪಷ್ಟವಾಗಿ ನೋಡಬಲ್ಲಂಥ ಕನ್ನಡಕ, ಬುಲೆಟ್ ಪ್ರೂಫ್ ಸಲಕರಣೆ, ಕೈ ಗವಸು, ಮಂಡಿ- ತೋಳಿಗೆ ಪ್ಯಾಡ್ ಇವೆಲ್ಲವನ್ನೂ ಸಿಬ್ಬಂದಿ ಹೊಂದಿರುತ್ತಾರೆ. ಜತೆಗೆ ಎಸ್ ಪಿಜಿ ಬಳಿ ಆಧುನಿಕ ವಾಹನಗಳು ಇರುತ್ತವೆ. ಅವುಗಳಲ್ಲಿ ಶಸ್ತ್ರಾಸ್ತ್ರಗಳು ಇದ್ದು, ವಾಹನಗಳು ಬುಲೆಟ್ ಪ್ರೂಫ್ ಆಗಿರುತ್ತವೆ.

ಭಾರತೀಯ ವಾಯು ಸೇನೆಯ ವಿಮಾನ, ಹೆಲಿಕಾಪ್ಟರ್ ಬಳಕೆ

ಬಿಎಂಡಬ್ಲ್ಯು 7 ಸಿರೀಸ್ ಕಾರುಗಳು, ರೇಂಜ್ ರೋವರ್ಸ್, ಬಿಎಂ ಡಬ್ಲ್ಯು, ಟೊಯೋಟಾ ಹಾಗೂ ಟಾಟಾ ನಿರ್ಮಿತ ಎಸ್ ಯುವಿಗಳು ಇರುತ್ತವೆ. ಎಸ್ ಪಿಜಿಯಿಂದ ಭಾರತೀಯ ವಾಯು ಸೇನೆಯ ವಿಮಾನ, ಹೆಲಿಕಾಪ್ಟರ್ ಕೂಡ ಬಳಸಲಾಗುತ್ತದೆ.

24 ಗಂಟೆ ಮುಂಚಿತವಾಗಿಯೇ ಸ್ಥಳ ತಪಾಸಣೆ

ಎಸ್​ಪಿಜಿಯ ಭದ್ರತೆಯಲ್ಲಿ ಇರುವ ಅತಿ ಗಣ್ಯರು ಪ್ರತಿ ಸಲ ಪ್ರಯಾಣ ಮಾಡುವಾಗಲೂ ಅವರ ಜತೆಗೆ ಎಸ್​ಪಿಜಿಯ ಹಲವು ಸಣ್ಣ ತಂಡಗಳು ಸಹ ಜೊತೆಯಾಗಿ ಪ್ರಯಾಣ ಮಾಡುತ್ತವೆ. ಯಾವುದೇ ಭದ್ರತಾ ಆತಂಕಗಳು ಎದುರಾಗದಂತೆ ಎಚ್ಚರ ವಹಿಸುತ್ತವೆ. ಯಾವ ಗಣ್ಯರಿಗೆ ಎಸ್ ಪಿಜಿ ಭದ್ರತೆ ಒದಗಿಸಲಾಗಿದೆಯೋ ಅವರು ಭೇಟಿ ನೀಡುವ ಸ್ಥಳಕ್ಕೆ 24 ಗಂಟೆ ಮುಂಚಿತವಾಗಿ ತೆರಳುವ ತಂಡ ಸಂಪೂರ್ಣ ತಪಾಸಣೆ ಕೈಗೊಳ್ಳುತ್ತದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Sat, 6 May 23