ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ

ಮದನ್​ ಕುಮಾರ್​
|

Updated on: Oct 11, 2024 | 9:11 PM

‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್​’ ಸಿನಿಮಾ ಗ್ರ್ಯಾಂಡ್​ ಆಗಿ ಬಿಡುಗಡೆ ಆಗಿದೆ. ಎ.ಪಿ. ಅರ್ಜುನ್​ ನಿರ್ದೇಶನ ಮಾಡಿದ ಈ ಸಿನಿಮಾಗೆ ಸಿನಿಪ್ರಿಯರು ಭರ್ಜರಿ ಸ್ವಾಗತ ಕೋರಿದ್ದಾರೆ. ಹಲವು ಚಿತ್ರಮಂದಿರಗಳು ಹೌಸ್​ಫುಲ್​ ಆಗಿವೆ. ಬೆಂಗಳೂರಿನಲ್ಲಿ ಥಿಯೇಟರ್​ ಎದುರು ಮಕ್ಕಳು ಡ್ಯಾನ್ಸ್​ ಮಾಡುವ ಮೂಲಕ ಸೆಲೆಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ.

ಎಲ್ಲ ವರ್ಗದ ಪ್ರೇಕ್ಷಕರು ‘ಮಾರ್ಟಿನ್’ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ ಎಂಬುದು ಧ್ರುವ ಸರ್ಜಾ ಅವರಿಗೆ ಸಂತಸ ತಂದಿದೆ. ಆ್ಯಕ್ಷನ್​ ಇಷ್ಟಪಡುವ ಪ್ರೇಕ್ಷಕರು ಈ ಚಿತ್ರವನ್ನು ಹೆಚ್ಚು ಹೊಗಳುತ್ತಿದ್ದಾರೆ. ರಾಜ್ಯಾದ್ಯಂತ ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಆಗಿದೆ. ದಸರಾ ಪ್ರಯುಕ್ತ ತೆರೆಕಂಡ ‘ಮಾರ್ಟಿನ್​’ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಆಗಿದೆ. ಉದಯ್​ ಮೆಹ್ತಾ ನಿರ್ಮಾಣದ ಈ ಚಿತ್ರಕ್ಕೆ ಎ.ಪಿ. ಅರ್ಜುನ್ ಅವರು ನಿರ್ದೇಶನ ಮಾಡಿದ್ದಾರೆ. ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್​, ಚಿಕ್ಕಣ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.