‘ಚಿನ್ನಾರಿಮುತ್ತ’ನಿಗೆ 31 ವರ್ಷ, ನೆನಪಿನ ಬುತ್ತಿ ತೆರೆದಿಟ್ಟ ವಿಜಯ್ ರಾಘವೇಂದ್ರ
ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿರುವ ‘ಚಿನ್ನಾರಿ ಮುತ್ತ’ ಬಿಡುಗಡೆ ಆಗಿ 31 ವರ್ಷಗಳಾಗಿವೆ. ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ವಿಜಯ್ ರಾಘವೇಂದ್ರ, ಆ ಸಿನಿಮಾದ ಕೆಲ ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಬಾಲನಟನಾಗಿ ನಟಿಸಿ, ಟಿಎಸ್ ನಾಗಾಭರಣ ನಿರ್ದೇಶನ ಮಾಡಿದ್ದ ‘ಚಿನ್ನಾರಿಮುತ್ತ’ ಸಿನಿಮಾ ಬಿಡುಗಡೆ ಆಗಿ 31 ವರ್ಷಗಳಾಗಿವೆ. ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಅತ್ಯುತ್ತಮ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ‘ಚಿನ್ನಾರಿಮುತ್ತ’ ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾದ ಚಿತ್ರೀಕರಣದ ಅನುಭವ, ಸಿನಿಮಾದಿಂದ ಧಕ್ಕಿದ ಜನಪ್ರಿಯತೆ, ಸಿನಿಮಾಕ್ಕೆ ಧಕ್ಕಿದ ಯಶಸ್ಸು ಇನ್ನಿತರೆ ವಿಷಯಗಳ ಬಗ್ಗೆ ನಟ ವಿಜಯ್ ರಾಘವೇಂದ್ರ ನೆನಪು ಮಾಡಿಕೊಂಡಿದ್ದಾರೆ. ಅಂದಹಾಗೆ ಈಗ ಟಿಎಸ್ ನಾಗಾಭರಣ ಪತ್ನಿ, ‘ಜೀನಿಯಸ್ ಮುತ್ತು’ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸಹ ಮಕ್ಕಳ ಸಿನಿಮಾನೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 29, 2024 10:52 PM
Follow Us
Latest Videos
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

