ಉಡುಪಿಯಲ್ಲಿ ಹಾಡಹಗಲೇ IT ರೇಡ್ ಹೆಸರಲ್ಲಿ ದರೋಡೆ ಯತ್ನ, ತಪ್ಪಿದ ಭಾರೀ ಅನಾಹುತ

ಉಡುಪಿಯಲ್ಲಿ ಹಾಡಹಗಲೇ IT ರೇಡ್ ಹೆಸರಲ್ಲಿ ದರೋಡೆ ಯತ್ನ, ತಪ್ಪಿದ ಭಾರೀ ಅನಾಹುತ

ರಮೇಶ್ ಬಿ. ಜವಳಗೇರಾ
|

Updated on: Jul 29, 2024 | 5:42 PM

ಹಾಡು ಹಗಲೇ ಮನೆ ದರೋಡೆ ಯತ್ನ ಪ್ರಕರಣ ಉಡುಪಿಯಲ್ಲಿ ನಡೆದಿದೆ. ಐಟಿ ದಾಳಿ ಮಾದರಿಯಲ್ಲೇ ಬಂದ ಎಂಟು ಜನರ ತಂಡ ಮನೆ ದರೋಡೆಗೆ ಯತ್ನಿಸಿದೆ. ಆದ್ರೆ, ಸಿಸಿ ಕ್ಯಾಮೆರಾ ವ್ಯವಸ್ಥೆ ಅದನ್ನು ವಿಫಲಗೊಳಿಸಿದೆ. ಮನೆಯ ಸಿಸಿಟಿವಿ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುವ ಸೈನ್​ ಇನ್​ ಸೆಕ್ಯುರಿಟಿ ಸಂಸ್ಥೆಗೆ ಅಲರ್ಟ್​ ಹೋಗಿದ್ದು. ಕೂಡಲೇ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದು ಹೇಗಾಯ್ತು ಎನ್ನುವುದು ಇಲ್ಲಿದೆ ನೋಡಿ.

ಉಡುಪಿ, (ಜುಲೈ 29): ಐಟಿ ಅಧಿಕಾರಿಗಳ ಮಾದರಿಯಲ್ಲಿ ಮನೆಯ ಮೇಲೆ ದಾಳಿ ಮಾಡಿ, ದರೋಡೆಗೆ ಯತ್ನಿಸಿದೆ. ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಕವಿತಾ ಎಂಬುವರ ನಿವಾಸಕ್ಕೆ ಇದೇ ಜುಲೈ 25ರ ಮುಂಜಾನೆ 8:30 ರ ಸುಮಾರಿಗೆ ಗ್ಯಾಂಗ್ ನುಗ್ಗಿತ್ತು. ಆದರೆ ದರೋಡೆ ಯತ್ನ ವಿಫಲಗಿದೆ. ದಿನದ 24 ಗಂಟೆಯೂ ಲೈವ್ ಸರ್ವೆಲೆನ್ಸ್ ಮಾಡುವ ಸಿ ಸಿ ಕ್ಯಾಮೆರಾ ಸೆಕ್ಯೂರಿಟಿ ಸಂಸ್ಥೆಯ ಸಕಾಲದ ಎಚ್ಚರಿಕೆ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. 6-8 ಜನರ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಮನೆ ಬಳಿ ಬಂದಿದ್ದರು. ಬಳಿಕ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶೀಸಿದ್ದರು. ನಂತರ ಬಾಗಿಲು ಬಡಿದು ಮನೆಯವರನ್ನ ಕರೆದಿದ್ದಾರೆ. ಆದರೆ, ಮನೆ ಬಾಗಿಲು ತೆರೆಯದಿದ್ದರಿಂದ ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದಾರೆ. ಇನ್ನು ಮನೆಯ ಕಾಂಪೌಂಡ್ ಹಾರಿ, ಒಳ ಪ್ರವೇಶಿಸಿ ಕೆಲವು ವಸ್ತುಗಳಿಗೆ ಹಾನಿ ಮಾಡಿ ತೆರಳಿದ ಎಂಟು ಜನರ ತಂಡದ ಭಯಾನಕ ಕೃತ್ಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.