ಬಾಲ್ಯದಲ್ಲಿ ಪುನೀತ್ಗೆ ದೊಡ್ಡ ಕಲಾವಿದ ಆಗುತ್ತೀಯಾ ಅಂದಾಗ ಏನು ಉತ್ತರಿಸಿದ್ದರು ಗೊತ್ತೇ?; ಅಚ್ಚರಿಯ ವಿಚಾರ ಇಲ್ಲಿದೆ
Puneeth Rajkumar: ಪುನೀತ್ ರಾಜ್ಕುಮಾರ್ ಮಾವ ಚಿನ್ನೇಗೌಡ ಪುನೀತ್ ಕುರಿತ ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಓದಿ.
ನಟ ಪುನೀತ್ ರಾಜ್ ಕುಮಾರ್ ಕುರಿತಂತೆ ಹಲವು ಅಪರೂಪದ ಸಂಗತಿಗಳನ್ನು ಅವರ ಮಾವ ಚಿನ್ನೇಗೌಡ ಟಿವಿ9ನೊಂದಿಗೆ ಹಂಚಿಕೊಂಡಿದ್ದಾರೆ. ಇದುವರೆಗೆ ಹೆಚ್ಚಿನ ಜನರಿಗೆ ತಿಳಿದಿರದ ವಿಚಾರಗಳನ್ನು ಹೇಳುತ್ತಾ ಅವರು, ಪುನೀತ್ ಬಾಲ್ಯದ ಒಂದು ಘಟನೆ ಸ್ಮರಿಸಿಕೊಂಡಿದ್ದಾರೆ. ಪುನೀತ್ ಅವರನ್ನು ಎತ್ತಿ ಆಡಿಸಿ, ಬೆಳೆಸಿದ ಕೈಗಳಿವು. ಅಪ್ಪು ಸಣ್ಣವನಿದ್ದಾಗ ಮೈಸೂರಿಗೆ ಶೂಟಿಂಗ್ ಬಂದಿದ್ದ. ನನಗಿನ್ನೂ ಚೆನ್ನಾಗಿ ಜ್ಞಾಪಕವಿದೆ. ಅವನಿಗೆ ಸ್ನಾನ ಮಾಡಿಸುತ್ತಿದ್ದೆ. ಆಗ ಅವನ ಎದೆಯನ್ನು ನೋಡಿದಾಗ ನನಗೆ ಒಂದು ರೀತಿಯ ಖುಷಿ ಆಗುತ್ತಿತ್ತು. ಆಗ ಅವನಿಗೆ, ನೀನು ದೊಡ್ಡ ಕಲಾವಿದ ಆಗುತ್ತೀಯಾ.. ಅಂತ ಹೇಳುತ್ತಿದ್ದೆ. ಆಗ ಪುನೀತ್ ‘ಏ ಇಲ್ಲ ಮಾಮಾ, ನನಗೆ ಅದೆಲ್ಲಾ ಬೇಡ’ ಅಂತ ಹೇಳುತ್ತಿದ್ದ. ನೀನು ದೊಡ್ಡ ಕಲಾವಿದ ಆದ್ರೆ ನನಗೆ ಕಾಲ್‌ಶೀಟ್ ಕೊಡ್ತೀಯಾ ಅಂತ ಕೇಳಿದಾಗ, ಏನ್ ಮಾಮಾ, ನನಗದು ಇಷ್ಟ ಇಲ್ಲ ಅಂತ ಹೇಳ್ತಿದೀನಿ..’ ಅಂತ ಅನ್ನುತ್ತಿದ್ದ ಎಂದು ಚಿನ್ನೇಗೌಡರು ನೆನಪಿಸಿಕೊಂಡಿದ್ದಾರೆ. ಹಾಗೆ ಹೇಳುತ್ತಿದ್ದ ಪುನೀತ್ ನಂತರ ಬಹುದೊಡ್ಡ ಕಲಾವಿದನಾಗಿ ಬೆಳೆದದ್ದು ಅಚ್ಚರಿ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ರಾಜ್‌ಕುಮಾರ್ ಅವರನ್ನು ಆಗ ಎಲ್ಲರೂ ಕೇಳೋರು. ‘ಅಣ್ಣಾ ನಿಮ್ಮ ನಂತರ ಯಾರು?’ ಅಂತ. ಆಗ ಅವರು, ನನಗಿಂತ ಚೆನ್ನಾಗಿರೋ ಕಲಾವಿದರು ಬರಬೇಕು. ಅವರನ್ನು ನಾನು ನೋಡಬೇಕು ಎಂದು ಹೇಳೋರು. ಅದಕ್ಕೆ ಭಗವಂತ ಅವರ ಹೊಟ್ಟೆಯಲ್ಲೇ ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್ ರೂಪದಲ್ಲಿ ಅದ್ಭುತ ಕಲಾವಿದರನ್ನು ನೀಡಿದ. ಅದರಲ್ಲೂ ಅಪ್ಪು ವ್ಯಕ್ತಿತ್ವ ಎಂದರೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. ಅಂತಹ ವ್ಯಕ್ತಿತ್ವ ಹೊಂದಿರುವ ಪುನೀತ್ ಇಂದು ನಮ್ಮೊಂದಿಗಿಲ್ಲ ಎನ್ನುವುದು ದುಃಖದ ಸಂಗತಿ ಎಂದು ಚಿನ್ನೇಗೌಡ ಅವರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:
Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ?
‘ಪುನೀತ ನಮನ’ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಆಗಮಿಸಿದ ಸ್ಟಾರ್ಗಳು