‘ಪುನೀತ ನಮನ’ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಆಗಮಿಸಿದ ಸ್ಟಾರ್ಗಳು
2000 ಜನರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಸಿಎಂ, ಮಾಜಿ ಸಿಎಂ ಹಾಗೂ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ಪುನೀತ್ ರಾಜ್ಕುಮಾರ್ (Puneeth Rajkumar). ಅವರ ಅಕಾಲಿಕ ಸಾವು ಸಾಕಷ್ಟು ಜನರಿಗೆ ನೋವು ತಂದಿದೆ. ಕನ್ನಡ ಚಿತ್ರರಂಗದ ಪರವಾಗಿ ಪುನೀತ್ ಅವರಿಗೆ ನಮನ ಸಲ್ಲಿಸಲಾಗುತ್ತಿದೆ. ‘ಪುನೀತ ನಮನ’ ಕಾರ್ಯಕ್ರಮ ಇಂದು (ನವೆಂಬರ್ 16) ಮಧ್ಯಾಹ್ನ 3 ಗಂಟೆಗೆ ಆರಂಭವಾಗುತ್ತಿದೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆಯುತ್ತಿದೆ. ಒಂದು ಗಂಟೆ ಮೊದಲೇ ಸ್ಟಾರ್ಗಳು ಆಗಮಿಸುತ್ತಿದ್ದಾರೆ. ಪ್ರಕಾಶ್ ರಾಜ್ ಸೇರಿ ಮೊದಲಾದ ಸ್ಟಾರ್ಗಳು ಒಂದು ಗಂಟೆ ಮುಂಚಿತವಾಗಿ ಬಂದಿದ್ದಾರೆ.
2000 ಜನರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಸಿಎಂ, ಮಾಜಿ ಸಿಎಂ ಹಾಗೂ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವಿದೆ. ಕಾರ್ಯಕ್ರಮಕ್ಕೆ ಸುದೀಪ್, ಯಶ್, ಗಣೇಶ್, ಶಿವರಾಜ್ಕುಮಾರ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗುತ್ತಿದ್ದಾರೆ. ರಾಜಕೀಯ ರಂಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇಡೀ ಸಚಿವ ಸಂಪುಟ ಭಾಗವಹಿಸಲಿದೆ. ಮೂರು ಮಾಜಿ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಮೈಸೂರಿನ ಮಹಾರಾಜ ಯದುವೀರ್ ಅವರು ಕೂಡ ಬರಲಿದ್ದಾರೆ.
ಕಾರ್ಯಕ್ರಮ ಪಟ್ಟಿ
ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆಯ ಮೂಲಕ ನಮನ ಕಾರ್ಯಕ್ರಮ ಆರಂಭ ಆಗುತ್ತದೆ. ವಿಜಯ್ ಪ್ರಕಾಶ್, ಗುರುಕಿರಣ್ ಹಾಗೂ ರಾಜೇಶ್ ಕೃಷ್ಣನ್ ಅವರಿಂದ ಗೀತ ನಮನ ನಡೆಯಲಿದೆ. ಮೂರು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ.\
ಸ್ಯಾಂಡಲ್ವುಡ್ ಮಂದಿಗೆ ಆಹ್ವಾನ
ಪುನೀತ್ ನಮನ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಇಲ್ಲ. ಸ್ಯಾಂಡಲ್ವುಡ್ನ 142 ಕಲಾವಿದರಿಗೆ ಆಮಂತ್ರಣ ನೀಡಲಾಗಿದೆ. ಪರಭಾಷೆಯ 40 ಕ್ಕೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಅನಗತ್ಯವಾಗಿ ಅವ್ಯವಸ್ಥೆ ಆದರೆ ನಮ್ಮ ಇಲಾಖೆ ಹೊಣೆಯಲ್ಲ ಎಂಬ ಸೂಚನೆ ಪೊಲೀಸ್ ಇಲಾಖೆಯಿಂದ ಬಂದಿದೆ.