ಯಶ್​ ನಟನೆಯ ‘ಕೆಜಿಎಫ್​ 2’ಗೆ ಸೆಡ್ಡು ಹೊಡೆಯಲಿದೆ ಸ್ಟಾರ್​ ನಟನ ಸಿನಿಮಾ; ಗೆಲ್ಲೋದು ಯಾರು ನೀವೇ ಹೇಳಿ

ಇಂಗ್ಲಿಷ್​ನಲ್ಲಿ ತೆರೆಗೆ ಬಂದ ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ‘ಲಾಲ್​ ಸಿಂಗ್​ ಚಡ್ಡಾ’. ಆಮಿರ್​ ಖಾನ್​ ಹೆಚ್ಚು ಇಷ್ಟಪಟ್ಟು ಈ ಸಿನಿಮಾವನ್ನು ನಿರ್ಮಿಸಿ, ನಟಿಸುತ್ತಿದ್ದಾರೆ. ಕೊವಿಡ್​ ಕಾರಣದಿಂದ ಚಿತ್ರದ ಶೂಟಿಂಗ್​ ವಿಳಂಬವಾಗಿದೆ.

ಯಶ್​ ನಟನೆಯ ‘ಕೆಜಿಎಫ್​ 2’ಗೆ ಸೆಡ್ಡು ಹೊಡೆಯಲಿದೆ ಸ್ಟಾರ್​ ನಟನ ಸಿನಿಮಾ; ಗೆಲ್ಲೋದು ಯಾರು ನೀವೇ ಹೇಳಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 16, 2021 | 1:45 PM

ಶಾರುಖ್​ ಖಾನ್​ (Shah Rukh Khan) ನಟನೆಯ ‘ಜೀರೋ’ ಸಿನಿಮಾದ (Zero Movie) ಎದುರು ಯಶ್​  (Yash) ನಟನೆಯ ‘ಕೆಜಿಎಫ್​’ (KGF) ರಿಲೀಸ್​ ಆಗಿತ್ತು. ಯಶ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಅಷ್ಟೇ ಅಲ್ಲ, ಶಾರುಖ್​ ಚಿತ್ರದ ಎದುರು ಯಶ್​ ಸಿನಿಮಾ ಗೆದ್ದು ಬೀಗಿತ್ತು. ಈಗ ‘ಕೆಜಿಎಫ್​ 2’  (KGF Chapter 2) ರಿಲೀಸ್​ಗೆ ರೆಡಿ ಇದೆ. ಏಪ್ರಿಲ್​ 14ರಂದು ಈ ಚಿತ್ರ ರಿಲೀಸ್​ ಆಗುತ್ತಿದೆ. ಈವರೆಗೆ ಯಾವುದೇ ಸ್ಟಾರ್​ ನಟರು ಇದೇ ಸಂದರ್ಭದಲ್ಲಿ ಸಿನಿಮಾ ರಿಲೀಸ್​ ಮಾಡುವ ಬಗ್ಗೆ ಘೋಷಣೆ ಮಾಡಿಲ್ಲ. ಆದರೆ, ಬಾಲಿವುಡ್​ನ ಸ್ಟಾರ್​ ನಟನ ಸಿನಿಮಾ ಇದೇ ದಿನಾಂಕದಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಮೂಲಕ ‘ಕೆಜಿಎಫ್​ 2’ ಸಿನಿಮಾ ಜತೆ ಸ್ಪರ್ಧೆಗೆ ಇಳಿಯಲಿದೆ. ಹಾಗಾದರೆ ಯಾವುದು ಆ ಸಿನಿಮಾ? ‘ಲಾಲ್​ ಸಿಂಗ್​ ಚಡ್ಡಾ’ ( Laal Singh Chaddha).

ಇಂಗ್ಲಿಷ್​ನಲ್ಲಿ ತೆರೆಗೆ ಬಂದ ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ‘ಲಾಲ್​ ಸಿಂಗ್​ ಚಡ್ಡಾ’. ಆಮಿರ್​ ಖಾನ್​ ಹೆಚ್ಚು ಇಷ್ಟಪಟ್ಟು ಈ ಸಿನಿಮಾವನ್ನು ನಿರ್ಮಿಸಿ, ನಟಿಸುತ್ತಿದ್ದಾರೆ. ಕೊವಿಡ್​ ಕಾರಣದಿಂದ ಚಿತ್ರದ ಶೂಟಿಂಗ್​ ವಿಳಂಬವಾಗಿದೆ. ಇಲ್ಲವಾದರೆ ಈ ಸಿನಿಮಾ ಈ ವರ್ಷ ಕ್ರಿಸ್​ಮಸ್​ಗೆ ತೆರೆಗೆ ಬರಬೇಕಿತ್ತು. ಆದರೆ, ಎಲ್ಲ ಕೆಲಸಗಳು ವಿಳಂಬವಾಗಿವೆ. ಹೀಗಾಗಿ, ಈ ‘ಲಾಲ್​ ಸಿಂಗ್​ ಚಡ್ಡಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಏಪ್ರಿಲ್​ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ‘ಕೆಜಿಎಫ್​ 2’ ಸಿನಿಮಾ ಎದುರು ಈ ಚಿತ್ರ ಸೆಡ್ಡು ಹೊಡೆಯಲಿದೆ ಎನ್ನಲಾಗುತ್ತಿದೆ.

‘ಕೆಜಿಎಫ್​ 2’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಪ್ರಶಾಂತ್​ ನೀಲ್​ ನಿರ್ದೇಶನದ ಮೇಲೆ ಎಲ್ಲರಿಗೂ ದೊಡ್ಡ ಭರವಸೆ ಬಂದಿದೆ. ಇನ್ನು, ಚಿತ್ರತಂಡಕ್ಕೆ ಸಂಜಯ್​ ದತ್​, ರವೀನಾ ಟಂಡನ್​ ಕೂಡ ಸೇರ್ಪಡೆ ಆಗಿದ್ದಾರೆ. ಮೇಕಿಂಗ್​ನಲ್ಲೂ ಪ್ರಶಾಂತ್​ ನೀಲ್​ ಗಮನ ಸೆಳೆದಿದ್ದಾರೆ. ಈ ಎಲ್ಲಾ ಕಾರಣಕ್ಕೆ ‘ಕೆಜಿಎಫ್​ 2’ ಚಿತ್ರದ ಮೇಲೆ ಹೆಚ್ಚು ಭರವಸೆ ಇದೆ. ಆಮಿರ್​ ಖಾನ್​ ಸಿನಿಮಾ ಎದುರು ಯಶ್​ ಚಿತ್ರ ಗೆದ್ದು ಬೀಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಶಿವರಾಜ್​ಕುಮಾರ್​ ‘ಭಜರಂಗಿ 2’ಗೆ ಸಾತ್​ ನೀಡಿದ ಯಶ್​-ಪುನೀತ್​ ​; ಒಂದೇ ವೇದಿಕೆ ಮೇಲೆ ಮೂರು ಸ್ಟಾರ್​ಗಳು