ಪ್ರಧಾನಿ ಮೋದಿಗಾಗಿ ಶೇಂಗಾ ಹಾರ, ಪೇಟ ತಯಾರಿಸುತ್ತಿರುವ ಚಿತ್ರದುರ್ಗ ಕಾರ್ಯಕರ್ತರು, ವಿಡಿಯೋ ನೋಡಿ
ಶೇಂಗಾದಿಂದ ತಯಾರಿಸಿದ ವಿಶಿಷ್ಟ ಹಾರದಿಂದ ಗೌರವಿಸಲು ಸಿದ್ಧತೆ ನಡೆದಿದೆ. ಶೇಂಗಾದಿಂದ ತಯಾರಿಸಿದ ಪೇಟ ತೊಡಿಸಿ ಮೋದಿ ಹಣೆಗೆ ಅವರ ತಾಯಿ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್ ನೀಡಲು ತಯಾರಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳು ಹಾಗೂ ದಾವಣಗೆರೆ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳು ಸೇರಿ ಒಟ್ಟು ಹತ್ತು ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಮೊದಲಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಲಿದ್ದು ಮೋದಿ ಅವರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲು ಎಲ್ಲಾ ರೀತಿಯ ತಯಾರಿ ನಡೆದಿದೆ. ಶೇಂಗಾದಿಂದ ತಯಾರಿಸಿದ ವಿಶಿಷ್ಟ ಹಾರದಿಂದ ಗೌರವಿಸಲು ಸಿದ್ಧತೆ ನಡೆದಿದೆ. ಶೇಂಗಾದಿಂದ ತಯಾರಿಸಿದ ಪೇಟ ತೊಡಿಸಿ ಮೋದಿ ಹಣೆಗೆ ಅವರ ತಾಯಿ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್ ನೀಡಲು ತಯಾರಿ ನಡೆದಿದೆ. ಚಿತ್ರದುರ್ಗದ ಕಲಾವಿದ ಮೋದಿಗೆ ವೀರ ವನಿತೆ ಒನಕೆ ಓಬವ್ವ ವಿಗ್ರಹ ಗಿಫ್ಟ್ ನೀಡಲಿದ್ದಾರೆ.
ಪ್ರಧಾನಿ ಮೋದಿ ಆಗಮನಕ್ಕಾಗಿ ಕೋಟೆನಗರಿ ಕೇಸರಿಮಯವಾಗಿದ್ದು ಸಮಾವೇಶದ ವೇದಿಕೆ ಸಿದ್ಧಗೊಂಡಿದೆ. ನಗರದೆಲ್ಲೆಡೆ ಬಿಗಿ ಬಂದೋಬಸ್ತ್, ಸಂಚಾರಿ ಮಾರ್ಗ ಬದಲಾವಣೆ ಮಾಡಲಾಗಿದೆ. ಚಿತ್ರದುರ್ಗ ನಗರದ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಯಲಿದೆ. ಸುಮಾರು 75ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಐದು ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು ಕುಡಿಯುವ ನೀರಿಗೂ ವ್ಯವಸ್ಥೆಯಿದೆ. 1ಲಕ್ಷಕ್ಕೂ ಅಧಿಕ ಜನ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.