ಚಿತ್ರದುರ್ಗ- ವಿಷಕಾರಿ ನೀರು ಸೇವನೆಯಿಂದ ಸಾವು, ತಹಸೀಲ್ದಾರ್ ಜತೆ ಪ್ರತಿಭಟನಾಕಾರರ ವಾಗ್ವಾದ

| Updated By: ಸಾಧು ಶ್ರೀನಾಥ್​

Updated on: Aug 03, 2023 | 7:54 PM

ಮಧ್ಯಾಹ್ನದ ವೇಳೆ ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆ ನಿವಾಸಿಗಳಿಗೆ ಫುಡ್​​ಕಿಟ್ ವಿತರಿಸಲಾಯ್ತು. ತಹಶೀಲ್ದಾರ್​ ಜೊತೆ ವಾಗ್ವಾದ ನಡೆಸಿದ ಬಳಿಕ ಎಚ್ಚೆತ್ತಂತೆ ಕಂಡ ಜಿಲ್ಲಾಡಳಿತ ಫುಡ್ ಕಿಟ್ ವಿತರಣೆ ಮಾಡಿತು.

ಚಿತ್ರದುರ್ಗದ (Chitradurga) ಕವಾಡಿಗರಹಟ್ಟಿಗೆ ತಹಶೀಲ್ದಾರ್ (tehsildar) ನಾಗವೇಣಿ ನೇತೃತ್ವದ ತಂಡಕ್ಕೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷಕಾರಿ ನೀರು ಸೇವನೆಯಿಂದ (poisonous water) ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ (protestors) ಬಳಿ ತೆರಳಿ ವಿಚಾರಿಸಿದಾಗ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ನಡೆದು ಇಷ್ಟು ದಿನವಾದ್ರೂ ಈವರೆಗೂ ಸೂಕ್ತ ಅನ್ನ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿಲ್ಲವೆಂದು ಕಿಡಿಕಾರಿದ್ರು. ಈ ವೇಳೆ ತಹಸೀಲ್ದಾರ್ ನಾಗವೇಣಿ ಜತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ರು.

ತರಾಟೆ ಬಳಿಕ ಫುಡ್​ಕಿಟ್ ವಿತರಣೆ
ಇನ್ನು ಮಧ್ಯಾಹ್ನದ ವೇಳೆ ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆ ನಿವಾಸಿಗಳಿಗೆ ಫುಡ್​​ಕಿಟ್ ವಿತರಿಸಲಾಯ್ತು. ತಹಶೀಲ್ದಾರ್​ ಜೊತೆ ವಾಗ್ವಾದ ನಡೆಸಿದ ಬಳಿಕ ಎಚ್ಚೆತ್ತಂತೆ ಕಂಡ ಜಿಲ್ಲಾಡಳಿತ ಫುಡ್ ಕಿಟ್ ವಿತರಣೆ ಮಾಡಿತು. ಅಕ್ಕಿ, ಬೇಳೆ, ಗೋದಿ ಸೇರಿ ಇತರೆ ದಿನಬಳಕೆ ವಸ್ತುಗಳ ಕಿಟ್​ನ್ನು ಉಪವಿಭಾಗಧಿಕಾರಿ ಕಾರ್ತಿಕ್ ಮತ್ತು ತಹಸೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ವಿತರಣೆ ಮಾಡಲಾಯ್ತು.

ಜಿಲ್ಲಾಸ್ಪತ್ರೆಗೆ ಕೊನೆಗೂ ಶಾಸಕ ಭೇಟಿ
ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಕೊನೆಗೂ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ರು. ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ರು. ಬಳಿಕ ಕವಾಡಿಗರಹಟ್ಟಿ ಬಡಾವಣೆಗೂ ಭೇಟಿ ನೀಡಿದ್ರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ