Boxer MLA: ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರರಿಗೆ ಬಾಕ್ಸಿಂಗ್ ನಲ್ಲಿ ಅಪಾರ ಆಸಕ್ತಿ, ಮನೆ ಆವರಣದಲ್ಲಿ ಅಭ್ಯಾಸ!
ಹಾಗೆ ನೋಡಿದರೆ, ಬಾಕ್ಸಿಂಗ್ ನಲ್ಲಿ ಜಾಸ್ತಿ ಜನಕ್ಕೆ ಅಭಿರುಚಿ ಇರೋದಿಲ್ಲ, ಟಿವಿಯಲ್ಲಿ ನೋಡುವವರ ಸಂಖ್ಯೆಯೂ ಕಡಿಮೆಯೇ.
ಚಿತ್ರದುರ್ಗ: ಇದು ನಿಜಕ್ಕೂ ಮನಸ್ಸಿಗೆ ಮುದ ನೀಡುವ ವಿಡಿಯೋ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ನಮ್ಮ ಬಹುತೇಕ ರಾಜಕೀಯ ನಾಯಕರಿಗೆ (politicos) ಕ್ರೀಡೆಗಳೆಂದರೆ ಅಲರ್ಜಿ. ಅವರ ಇಡೀ ಬದುಕು ರಾಜಕೀಯ ಮಾಡುವುದರಲ್ಲೇ ಕಳೆದುಹೋಗುತ್ತದೆ. ಫಿಟ್ನೆಸ್ ಕಡೆ ಗಮನಹರಿಸುವ ಧುರೀಣರ ಸಂಖ್ಯೆ ಬಹಳ ಕಮ್ಮಿ. ಆದರೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ (KC Veerendra) ಇದಕ್ಕೆ ಅಪವಾದ ಎನಿಸುತ್ತಾರೆ. ಚಳ್ಳಕೆರೆಯಲ್ಲಿರುವ ತಮ್ಮ ನಿವಾಸದ ವಿಶಾಲ ಆವರಣದಲ್ಲಿ ಅವರು ಬಾಕ್ಸಿಂಗ್ (Boxing) ಅಭ್ಯಾಸ ನಿರತರಾಗಿರುವುದನ್ನು ನೋಡಹುದು. ಶಾಸಕನಿಗೆ ನೆರವಾಗುತ್ತಿರುವವರು ಟ್ರೇನರ್ ಆಗಿರಬಹುದು. ಅವರ ಪ್ರ್ಯಾಕ್ಟೀಸ್ ಸೆಷನ್ ನೋಡುತ್ತಿದ್ದರೆ ಬಹಳ ದಿನದಿಂದ ಉದರಲ್ಲಿ ತೊಡಗಿದ್ದಾರೆನ್ನುವುದು ಸ್ಪಷ್ಟವಾಗುತ್ತದೆ. ಹಾಗೆ ನೋಡಿದರೆ, ಬಾಕ್ಸಿಂಗ್ ನಲ್ಲಿ ಜಾಸ್ತಿ ಜನಕ್ಕೆ ಅಭಿರುಚಿ ಇರೋದಿಲ್ಲ, ಟಿವಿಯಲ್ಲಿ ನೋಡುವವರ ಸಂಖ್ಯೆಯೂ ಕಡಿಮೆಯೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos