Wonderkid: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಚಿತ್ರದುರ್ಗದ 10-ವರ್ಷದ ಬಾಲಕಿ ಮೂರು ನಿಮಿಷಗಳೊಳಗೆ ಬಾಯಿಪಾಠ ಹೇಳುತ್ತಾಳೆ!
ಮೂರು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಾನ್ವಿ ಒಂದೂ ಬಿಡದಂತೆ ಎಲ್ಲ 224 ಕ್ಷೇತ್ರಗಳ ಹೆಸರನ್ನು ಅರಳು ಹುರಿದಂತೆ ಹೇಳುತ್ತಾಳೆ. ಪ್ರತಿ ಕ್ಷೇತ್ರದ ಹೆಸರನ್ನು ಸ್ಫುಟವಾಗಿ, ಸರಿಯಾದ ಉಚ್ಛಾರಣೆಯೊಂದಿಗೆ ತಾನ್ವಿ ಹೇಳುತ್ತಾಳೆ.
ಚಿತ್ರದುರ್ಗ: ನೀವು ವಯಸ್ಕರಾಗಿರಬಹುದು, ಯುವಕರಾಗಿರಬಹುದು, ಮಹಿಳೆ ಅಥವಾ ಪುರುಷನಾಗಿರಬಹುದು, ವಿದ್ಯಾರ್ಥಿ ಇಲ್ಲವೇ ಉದ್ಯೋಗಿಯಾಗಿರಬಹುದು; ನಿಮಗೊಂದು ಚಿಕ್ಕ ಪ್ರಶ್ನೆ. ರಾಜ್ಯ ವಿಧಾನ ಸಭೆಗೆ ಚುನಾವಣೆ (Assembly polls) ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಅತ್ಯಂತ ಪ್ರಸ್ತುತ. ರಾಜ್ಯದಲ್ಲಿ 224 ಕ್ಷೇತ್ರಗಳಿವೆ (constituencies) ಅಂತ ಎಲ್ಲರಿಗೂ ಗೊತ್ತು, ಆದರೆ ಎಲ್ಲ ಕ್ಷೇತ್ರಗಳ ಹೆಸರುಗಳನ್ನು ಮಿಸ್ ಆಗದಂತೆ ಹೇಳಬಲ್ಲಿರಾ? ಒಂದು ಪ್ರಯತ್ನ ಮಾಡಬಲ್ಲಿರಾ? ಚಿತ್ರದುರ್ಗದ ತಾನ್ವಿ (Taanvi) ಹೆಸರಿನ 10-ವರ್ಷದ ಬಾಲಕಿಗೆ ಇದೇ ಪ್ರಶ್ನೆ ಕೇಳಿದರೆ, ನಾವೇ ಮುಜುಗುರಕ್ಕೊಳಗಾಗುತ್ತೇವೆ. ಮೂರು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಾನ್ವಿ ಒಂದೂ ಬಿಡದಂತೆ ಎಲ್ಲ 224 ಕ್ಷೇತ್ರಗಳ ಹೆಸರನ್ನು ಅರಳು ಹುರಿದಂತೆ ಹೇಳುತ್ತಾಳೆ. ಪ್ರತಿ ಕ್ಷೇತ್ರದ ಹೆಸರನ್ನು ಸ್ಫುಟವಾಗಿ, ಸರಿಯಾದ ಉಚ್ಛಾರಣೆಯೊಂದಿಗೆ ತಾನ್ವಿ ಹೇಳುತ್ತಾಳೆ. ಒಮ್ಮೆ ಕೇಳಿಸಿಕೊಳ್ಳಿ…
ಮತ್ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos