ಬಾಲಕನನ್ನ ಕಾಲಲ್ಲಿ ಒದ್ದು, ತುಳಿದು ರಾಕ್ಷಸೀ ಕೃತ್ಯ: ಸಂಸ್ಕೃತ ಶಾಲೆಯಲ್ಲಿ ಇವನೆಂಥಾ ಸುಸಂಸ್ಕೃತ ಶಿಕ್ಷಕ

Updated By: ರಮೇಶ್ ಬಿ. ಜವಳಗೇರಾ

Updated on: Oct 21, 2025 | 7:36 PM

ಪುಟ್ಟ ಬಾಲಕನ ಮೇಲೆ ಅಮಾನುಷ ಹಲ್ಲೆ. ಕಾಲಲ್ಲಿ ಒದ್ದು ತುಳಿದು ರಾಕ್ಷಸೀ ಕೃತ್ಯ. ಸಂಸ್ಕೃತ ಶಾಲೆಯಲ್ಲಿ ಕ್ರೌರ್ಯ ಮೆರೆದ ರಕ್ಕಸ ಶಿಕ್ಷಕ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ. ಹೌದು, ಈ ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇಗುಲ ರಾಜ್ಯ ಮಾತ್ರ ಅಲ್ಲ ದೇಶಾದ್ಯಂತ ಭಕ್ತರನ್ನು ಹೊಂದಿದೆ. ಜಾತ್ರೆ, ರಥೋತ್ಸವ ಸಂದರ್ಭದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ. ಇದೇ ದೇಗುಲ ಸೇರಿದ ಸಂಸ್ಕೃತ, ವೇದ, ವೀರಶೈವಾಗಮ ಶಾಲೆಯೊಂದಿದೆ. ಕಳೆದ 8ವರ್ಷಗಳಿಂದ ದೇಗುಲ ಹೊಂದಿಕೊಂಡಂತಿರುವ ಹಿಂಭಾಗದ ಕಟ್ಟಡದಲ್ಲೇ ಸಂಸ್ಕೃತ ಶಾಲೆಯಿದೆ. ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಸುಮಾರು ಮೂವತ್ತು ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ‌‌.

ಚಿತ್ರದುರ್ಗ, (ಅಕ್ಟೋಬರ್ 21): ಪುಟ್ಟ ಬಾಲಕನ ಮೇಲೆ ಅಮಾನುಷ ಹಲ್ಲೆ. ಕಾಲಲ್ಲಿ ಒದ್ದು ತುಳಿದು ರಾಕ್ಷಸೀ ಕೃತ್ಯ. ಸಂಸ್ಕೃತ ಶಾಲೆಯಲ್ಲಿ ಕ್ರೌರ್ಯ ಮೆರೆದ ರಕ್ಕಸ ಶಿಕ್ಷಕ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ. ಹೌದು, ಈ ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇಗುಲ ರಾಜ್ಯ ಮಾತ್ರ ಅಲ್ಲ ದೇಶಾದ್ಯಂತ ಭಕ್ತರನ್ನು ಹೊಂದಿದೆ. ಜಾತ್ರೆ, ರಥೋತ್ಸವ ಸಂದರ್ಭದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ. ಇದೇ ದೇಗುಲ ಸೇರಿದ ಸಂಸ್ಕೃತ, ವೇದ, ವೀರಶೈವಾಗಮ ಶಾಲೆಯೊಂದಿದೆ. ಕಳೆದ 8ವರ್ಷಗಳಿಂದ ದೇಗುಲ ಹೊಂದಿಕೊಂಡಂತಿರುವ ಹಿಂಭಾಗದ ಕಟ್ಟಡದಲ್ಲೇ ಸಂಸ್ಕೃತ ಶಾಲೆಯಿದೆ. ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಸುಮಾರು ಮೂವತ್ತು ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ‌‌.

ಆದ್ರೆ, ಸಂಸ್ಕೃತ ಶಾಲೆಯ ಶಿಕ್ಷಕನಾಗಿ ಸೇರಿಕೊಂಡಿರುವ ಗೌರಸಮುದ್ರ ಗ್ರಾಮದ ವಿರೇಶ್ ಹಿರೇಮಠ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದಿದ್ದಾನೆ. 9ವರ್ಷದ ವಿದ್ಯಾರ್ಥಿಗೆ ಅಜ್ಜಿಗೇಕೆ ಕರೆ ಮಾಡಿದೆ ಎಂದು ಪ್ರಶ್ನಿಸಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಶಿಕ್ಷಕ ವಿರೇಶನ ರಾಕ್ಷಸ ಕೃತ್ಯ ಮೊಬೈಲ್‌ ಕ್ಯಾಮರಾ ದಲ್ಲಿ ಸೆರೆ ಆಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.