ಫೇಸ್‌ಬುಕ್‌ನಲ್ಲಿ ಜಾಹೀರಾತು ಬಂದಾಗ ಕ್ಲಿಕ್ ಮಾಡಿದವ್ರ ಕಥೆ ಬಿಚ್ಚಿಟ್ಟ SP
ಐದು ವರ್ಷದ ಹಿಂದಿನ ಅಂದರೆ 2020ರ ಪ್ರಕರಣವನ್ನು ರಾಯಚೂರು ಪೊಲೀಸರು ಭೇದಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣದಲ್ಲಿ, ಆರೋಪಿಯಿಂದ ವಶಪಡಿಸಿಕೊಂಡ ಸುಮಾರು 18.29 ಲಕ್ಷ ರೂಪಾಯಿಗಳನ್ನು ಮಂಗಳವಾರ ಸಂಜೆ 6 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಂಚನೆಗೊಳಗಾದವರಿಗೆ ಹಿಂದಿರುಗಿಸಲಾಯಿತು
ರಾಯಚೂರು, (ಅಕ್ಟೋಬರ್ 21): ಐದು ವರ್ಷದ ಹಿಂದಿನ ಅಂದರೆ 2020ರ ಪ್ರಕರಣವನ್ನು ರಾಯಚೂರು ಪೊಲೀಸರು ಭೇದಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣದಲ್ಲಿ, ಆರೋಪಿಯಿಂದ ವಶಪಡಿಸಿಕೊಂಡ ಸುಮಾರು 18.29 ಲಕ್ಷ ರೂಪಾಯಿಗಳನ್ನು ಮಂಗಳವಾರ ಸಂಜೆ 6 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಂಚನೆಗೊಳಗಾದವರಿಗೆ ಹಿಂದಿರುಗಿಸಲಾಯಿತು. ರಾಯಚೂರು ನಗರದ ವಿದ್ಯಾನಗರ ನಿವಾಸಿ ಲಕ್ಷ್ಮೀಕಾಂತ್ ಅವರು 2020ರಲ್ಲಿ ಫೇಸ್‌ಬುಕ್‌ನಲ್ಲಿ ಟ್ರೇಡ್, MTFS ಜಾಹೀರಾತು ನೋಡಿ, ಹೆಚ್ಚಿನ ಲಾಭದ ಆಸೆಗೆ ಜಾಹೀರಾತಿನಲ್ಲಿದ್ದ ಇಮೇಲ್‌ಗೆ ಸಂಪರ್ಕಿಸಿ ಹಣ ಹೂಡಿಕೆ ಮಾಡಿ ಬಳಿಕ ಮೋಸ ಹೋಗಿದ್ದರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲಿಸರು, ಆರೋಪಿ ಹಾಗೂ ಆತನ ಸಂಬಂಧಿಕರ ಖಾತೆಗಳಿಂದ ಈ ಹಣವನ್ನು ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಪೇಸ್ ಬುಕ್ ನಲ್ಲಿರುವ ಬರುವ ಜಾಹೀರಾತು ಬಗ್ಗೆ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
