ವಿದ್ಯಾರ್ಥಿ ಮೇಲೆ ಮನಸೋ ಇಚ್ಛೆ ಹಲ್ಲೆ: ಶಿಕ್ಷಕನ ಕ್ರೌರ್ಯದ ಬಗ್ಗೆ ಎಸ್ಪಿ ಹೇಳಿದ್ದಿಷ್ಟು
ಪುಟ್ಟ ಬಾಲಕನ ಮೇಲೆ ಶಿಕ್ಷಕನೊಬ್ಬ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ಶಾಲೆಯಲ್ಲಿ ನಡೆದಿದೆ. ಸಂಸ್ಕೃತ ಶಾಲೆಯ ಶಿಕ್ಷಕನಾಗಿ ಸೇರಿಕೊಂಡಿರುವ ಗೌರಸಮುದ್ರ ಗ್ರಾಮದ ವಿರೇಶ್ ಹಿರೇಮಠ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದಿದ್ದಾನೆ. 9ವರ್ಷದ ವಿದ್ಯಾರ್ಥಿಗೆ ಅಜ್ಜಿಗೇಕೆ ಕರೆ ಮಾಡಿದೆ ಎಂದು ಪ್ರಶ್ನಿಸಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ.
ಚಿತ್ರದುರ್ಗ, (ಅಕ್ಟೋಬರ್ 21): ಪುಟ್ಟ ಬಾಲಕನ ಮೇಲೆ ಶಿಕ್ಷಕನೊಬ್ಬ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ಶಾಲೆಯಲ್ಲಿ ನಡೆದಿದೆ. ಸಂಸ್ಕೃತ ಶಾಲೆಯ ಶಿಕ್ಷಕನಾಗಿ ಸೇರಿಕೊಂಡಿರುವ ಗೌರಸಮುದ್ರ ಗ್ರಾಮದ ವಿರೇಶ್ ಹಿರೇಮಠ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದಿದ್ದಾನೆ. 9ವರ್ಷದ ವಿದ್ಯಾರ್ಥಿಗೆ ಅಜ್ಜಿಗೇಕೆ ಕರೆ ಮಾಡಿದೆ ಎಂದು ಪ್ರಶ್ನಿಸಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಶಿಕ್ಷಕ ವಿರೇಶನ ರಾಕ್ಷಸ ಕೃತ್ಯ ಮೊಬೈಲ್ ಕ್ಯಾಮರಾ ದಲ್ಲಿ ಸೆರೆ ಆಗಿದೆ. ನಿನ್ನೆ ಸಂಜೆಯಿಂದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ದೇಗುಲದ ಎಕ್ಸಿಕ್ಯೂಟಿವ್ ಆಫಿಸರ್ ಗಂಗಾಧರಪ್ಪ ನಿನ್ನೆ ತಡರಾತ್ರಿ ಈ ಬಗ್ಗೆ ನಾಯಕನಹಟ್ಟಿ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಶಿಕ್ಷಕನ ರಾಕ್ಷಸೀ ಕೃತ್ಯದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.
