ಲೇಡಿ ವಾರ್ಡನ್ ಲವ್ವಿಡವ್ವಿ ಫೋಟೋ, ವಿಡಿಯೋ ಇಟ್ಟುಕೊಂಡಿದ್ದಕ್ಕೆ ಸಹಾಯಕ ಕೊಲೆಯಾದ್ನಾ?
ಲಕ್ಕಪ್ಪ ಲಗಮನಿ ಎನ್ನುವಾತ ಹಾಸ್ಟೆಲ್ ಮಹಿಳಾ ವಾರ್ಡನ್ ಗೆ ಅನೌಪಚಾರಿಕವಾಗಿ ಸಹಾಯಕನಾಗಿ ಕೆಲಸ ಮಾಡ್ತಿದ್ದ. ಆದ್ರೆ, ಜುಲೈ 24ರಂದು ಬಾಗಲಕೋಟೆಯ ಕೆರೂರು ಪಟ್ಟಣದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ಐದು ದಿನ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಆದರೆ ಆತನ ಕುಟುಂಬ ಅದು ಅಪಘಾತವಲ್ಲ ಕೊಲೆ ಎನ್ನುತ್ತಿದೆ.
ಬಾಗಲಕೋಟೆ, (ಅಕ್ಟೋಬರ್ 21): ಲಕ್ಕಪ್ಪ ಲಗಮನಿ ಎನ್ನುವಾತ ಹಾಸ್ಟೆಲ್ ಮಹಿಳಾ ವಾರ್ಡನ್ ಗೆ ಅನೌಪಚಾರಿಕವಾಗಿ ಸಹಾಯಕನಾಗಿ ಕೆಲಸ ಮಾಡ್ತಿದ್ದ. ಆದ್ರೆ, ಜುಲೈ 24ರಂದು ಬಾಗಲಕೋಟೆಯ ಕೆರೂರು ಪಟ್ಟಣದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ಐದು ದಿನ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಆದರೆ ಆತನ ಕುಟುಂಬ ಅದು ಅಪಘಾತವಲ್ಲ ಕೊಲೆ ಎನ್ನುತ್ತಿದೆ.
ಮೃತನ ಮೊಬೈಲ್ ನ್ನು ಪತ್ನಿ ರೇಖಾಳಿಂದ ಪಡೆದು ಕೆಲ ಫೋಟೋ ,ವಿಡಿಯೊ ಡಿಲೀಟ್ ಮಾಡಿದ್ದಾರಂತೆ.ವಾರ್ಡನ್ ಜೊತೆ ಅದೊಬ್ಬ ಪಿಡಿಒ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.ಅದಕ್ಕೆ ಸಂಬಂಧಸಿದ ಫೋಟೋ ವಿಡಿಯೊ ಅದರಲ್ಲಿದ್ದವು.ಎಲ್ಲಿ ಅವುಗಳನ್ನು ಬಯಲು ಮಾಡುತ್ತಾನೊ?ನಮ್ಮ ಸಂಬಂಧ ಬಯಲಿಗೆಳೆಯುತ್ತಾನೊ ಎಂದು ವಾರ್ಡನ್ ಹಾಗೂ ಇತರರು ಸೇರಿ ನನ್ನ ಗಂಡ ಲಕ್ಕಪ್ಪನ ಕೊಲೆ ಮಾಡಿದ್ದಾರೆ ಎಂದು ಪತ್ನಿ ರೇಖಾ ಆರೋಪ ಮಾಡುತ್ತಿದ್ದಾಳೆ.

