ಕೋಟಾ ಶ್ರೀನಿವಾಸ ಪೂಜಾರಿಗೆ ಚುನಾವಣಾ ಖರ್ಚಿಗೆ ಹಣ ನೀಡಿದ ಚುರುಮುರಿ ವ್ಯಾಪಾರಿ
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಅಭ್ಯರ್ಥಿಗಳು ಕೊಂಚವೂ ಸಮಯ ಹರಣ ಮಾಡದೇ ಪ್ರಚಾರ ಶುರು ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರಚಾರ ಮಾಡುವ ವೇಳೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆ ಹಣ ನೀಡಿ ಗೆಲ್ಲಲಿ ಎಂದು ಹಾರೈಸಿದ್ದಾರೆ.
ಚಿಕ್ಕಮಗಳೂರು, ಮಾರ್ಚ್.22: ಚುರುಮುರಿ ವ್ಯಾಪಾರಿಯೊಬ್ಬರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಚುನಾವಣಾ ಖರ್ಚಿಗೆ ಹಣ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ 25 ಸಾವಿರ ಹಣ ಇಟ್ಟು ಕೊಟ್ಟಿದ್ದಾರೆ. ಇಂದು ಪ್ರಚಾರಕ್ಕೆಂದು ಹೋದಾಗ ಲೊಕೇಶ್, ತನ್ನ ನೆಚ್ಚಿನ ನಾಯಕನಿಗೆ ಹಣ ನೀಡಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ನಗರದ ವಿವಿದೆಡೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಚುರುಮುರಿ ಅಂಗಡಿಗೆ ಭೇಟಿ ನೀಡಿದ್ದು ವ್ಯಾಪಾರಿ ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ಸರಳ ಹಾಗೂ ಸಜ್ಜನ ವ್ಯಕ್ತಿತ್ವಕ್ಕೆ ಹೆಸರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ