ರಣಹದ್ದುಗಳು.. ಬೆಂಗಳೂರಿನ ಚಿತಾಗಾರಗಳಲ್ಲಿ ಡೆಡ್​ಬಾಡಿ ಹೆಸರಲ್ಲೂ ಹಣ ಲೂಟಿ!

| Updated By:

Updated on: Jul 26, 2020 | 12:54 AM

[lazy-load-videos-and-sticky-control id=”F8YUFvTOeXM”] ಬೆಂಗಳೂರು: ನಗರದಲ್ಲಿ ಸೋಂಕಿತರ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ. ಇದರಿಂದ ನಗರದ ವಿದ್ಯುತ್​ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಡುವೆ ನಗರದ ವಿದ್ಯುತ್ ಚಿತಾಗಾರಗಳಲ್ಲಿ ಹಣ ವಸೂಲಿ ಜೋರಾಗಿಯೇ ನಡೀತಿದೆ. ಡೆಡ್​ಬಾಡಿ ಅಂತ್ಯಸಂಸ್ಕಾರದ ಹೆಸರಿನಲ್ಲಿ ಚಿತಾಗಾರದ ಸಿಬ್ಬಂದಿ ಹಣದ ಡಿಮ್ಯಾಂಡ್​ ಇಡುತ್ತಿದ್ದಾರೆ. ಸಾಮಾನ್ಯವಾಗಿ ಕೊವಿಡ್ ಅಲ್ಲದ ಪರಿಸ್ಥಿತಿಯಲ್ಲಿ ಒಂದು ಡೆಡ್​ಬಾಡಿ ಸುಡಬೇಕು ಅಂದ್ರೆ ಬಿಬಿಎಂಪಿಯಿಂದ ಫಿಕ್ಸ್ ಮಾಡಿರೋ ಫೀಸ್ ಕೇವಲ 250 ರುಪಾಯಿ. ಕೊವಿಡ್​ನಿಂದ ಸತ್ತಿರೋ ಡೆಡ್ ಬಾಡಿಯಾಗಿದ್ರೂ […]

ರಣಹದ್ದುಗಳು.. ಬೆಂಗಳೂರಿನ ಚಿತಾಗಾರಗಳಲ್ಲಿ ಡೆಡ್​ಬಾಡಿ ಹೆಸರಲ್ಲೂ ಹಣ ಲೂಟಿ!
Follow us on

[lazy-load-videos-and-sticky-control id=”F8YUFvTOeXM”]

ಬೆಂಗಳೂರು: ನಗರದಲ್ಲಿ ಸೋಂಕಿತರ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ. ಇದರಿಂದ ನಗರದ ವಿದ್ಯುತ್​ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಈ ನಡುವೆ ನಗರದ ವಿದ್ಯುತ್ ಚಿತಾಗಾರಗಳಲ್ಲಿ ಹಣ ವಸೂಲಿ ಜೋರಾಗಿಯೇ ನಡೀತಿದೆ. ಡೆಡ್​ಬಾಡಿ ಅಂತ್ಯಸಂಸ್ಕಾರದ ಹೆಸರಿನಲ್ಲಿ ಚಿತಾಗಾರದ ಸಿಬ್ಬಂದಿ ಹಣದ ಡಿಮ್ಯಾಂಡ್​ ಇಡುತ್ತಿದ್ದಾರೆ.

ಸಾಮಾನ್ಯವಾಗಿ ಕೊವಿಡ್ ಅಲ್ಲದ ಪರಿಸ್ಥಿತಿಯಲ್ಲಿ ಒಂದು ಡೆಡ್​ಬಾಡಿ ಸುಡಬೇಕು ಅಂದ್ರೆ ಬಿಬಿಎಂಪಿಯಿಂದ ಫಿಕ್ಸ್ ಮಾಡಿರೋ ಫೀಸ್ ಕೇವಲ 250 ರುಪಾಯಿ. ಕೊವಿಡ್​ನಿಂದ ಸತ್ತಿರೋ ಡೆಡ್ ಬಾಡಿಯಾಗಿದ್ರೂ ಅಷ್ಟೇ ಫೀಸ್. ಆದ್ರೆ, ಕೊವಿಡ್ ಹೆಸರಲ್ಲಿ ವಿದ್ಯುತ್ ಚಿತಾಗಾರಗಳ ಸಿಬ್ಬಂದಿ ಡೆಡ್ ಬಾಡಿ ಅಂತಿಮ ಸಂಸ್ಕಾರದಲ್ಲೂ ಲೂಟಿಗಿಳಿದಿದ್ದಾರೆ.

ಒಂದು ಡೆಡ್ ಬಾಡಿಯ ಅಂತಿಮ ಸಂಸ್ಕಾರಕ್ಕೆ 4ಸಾವಿರದಿಂದ 11,500 ರುಪಾಯಿವರೆಗೆ ಡಿಮ್ಯಾಂಡ್​ ಮಾಡ್ತಿದ್ದಾರೆ. ಬೆಂಗಳೂರಲ್ಲಿರೋ ವಿದ್ಯುತ್ ಚಿತಾಗರಗಳಲ್ಲಿ ಕೊವಿಡ್​ನಿಂದ ಸತ್ತಿರೋ ಡೆಡ್​ಬಾಡಿಯ ಅಂತ್ಯಸಂಸ್ಕಾರಕ್ಕೆ ಏನೆಲ್ಲಾ ನಿಯಮಗಳನ್ನ ಪಾಲಿಸ್ತಿದ್ದಾರೆ ಮತ್ತು ಎಷ್ಟೆಲ್ಲಾ ಚಾರ್ಜ್ ಮಾಡ್ತಿದ್ದಾರೆ ಅಂತಾ ಬಯಲಿಗೆಳೆಯೋದಕ್ಕೆ ಟಿವಿ9 ರಹಸ್ಯ ಕಾರ್ಯಾಚರಣೆ ನಡೆಸಿದೆ.

Published On - 9:24 am, Sat, 25 July 20