[lazy-load-videos-and-sticky-control id=”vmXYbvsKh4U”]
ದಾವಣಗೆರೆ: ರಾಜ್ಯದಲ್ಲಿ ಮುಂಗಾರು ಗರಿಗೆದರಿದ್ದು ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ರೈತರಲ್ಲಿ ಸಂತಸ ಮನೆಮಾಡಿದೆ. ಮುಂಗಾರು ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆಯಲ್ಲಿ ರೈತರು ಹುಮ್ಮಸ್ಸಿನಿಂದ ಭಾಗಿಯಾಗಿಯಾಗುತ್ತಿದ್ದಾರೆ.
ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರೈತರ ಸಂತೋಷಕ್ಕೆ ಪಾರವೆ ಇಲ್ಲದಂತಾಗಿದೆ. ದಾವಣಗೆರೆ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಚೆಕ್ ಡ್ಯಾಂ ಉಕ್ಕಿ ಹರಿಯುತ್ತಿದೆ.
ಜೊತೆಗೆ ಜಿಲ್ಲೆಯ ಹಲವೆಡೆ ನೀರು ಸಂಗ್ರಹಣೆಗಾಗಿ ಮಾಡಿರುವ ಚೆಕ್ ಡ್ಯಾಮ್ ಗಳು ಭಾಗಶಃ ಭರ್ತಿಯಾಗಿದ್ದು ಮೈದುಂಬಿ ಹರಿಯುತ್ತಿವೆ. ಇದರಿಂದಾಗಿ ಆ ಭಾಗದ ಜನ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.