ರಣಹದ್ದುಗಳು.. ಬೆಂಗಳೂರಿನ ಚಿತಾಗಾರಗಳಲ್ಲಿ ಡೆಡ್ಬಾಡಿ ಹೆಸರಲ್ಲೂ ಹಣ ಲೂಟಿ!
[lazy-load-videos-and-sticky-control id=”F8YUFvTOeXM”] ಬೆಂಗಳೂರು: ನಗರದಲ್ಲಿ ಸೋಂಕಿತರ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ. ಇದರಿಂದ ನಗರದ ವಿದ್ಯುತ್ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಡುವೆ ನಗರದ ವಿದ್ಯುತ್ ಚಿತಾಗಾರಗಳಲ್ಲಿ ಹಣ ವಸೂಲಿ ಜೋರಾಗಿಯೇ ನಡೀತಿದೆ. ಡೆಡ್ಬಾಡಿ ಅಂತ್ಯಸಂಸ್ಕಾರದ ಹೆಸರಿನಲ್ಲಿ ಚಿತಾಗಾರದ ಸಿಬ್ಬಂದಿ ಹಣದ ಡಿಮ್ಯಾಂಡ್ ಇಡುತ್ತಿದ್ದಾರೆ. ಸಾಮಾನ್ಯವಾಗಿ ಕೊವಿಡ್ ಅಲ್ಲದ ಪರಿಸ್ಥಿತಿಯಲ್ಲಿ ಒಂದು ಡೆಡ್ಬಾಡಿ ಸುಡಬೇಕು ಅಂದ್ರೆ ಬಿಬಿಎಂಪಿಯಿಂದ ಫಿಕ್ಸ್ ಮಾಡಿರೋ ಫೀಸ್ ಕೇವಲ 250 ರುಪಾಯಿ. ಕೊವಿಡ್ನಿಂದ ಸತ್ತಿರೋ ಡೆಡ್ ಬಾಡಿಯಾಗಿದ್ರೂ […]
[lazy-load-videos-and-sticky-control id=”F8YUFvTOeXM”]
ಬೆಂಗಳೂರು: ನಗರದಲ್ಲಿ ಸೋಂಕಿತರ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ. ಇದರಿಂದ ನಗರದ ವಿದ್ಯುತ್ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ.
ಈ ನಡುವೆ ನಗರದ ವಿದ್ಯುತ್ ಚಿತಾಗಾರಗಳಲ್ಲಿ ಹಣ ವಸೂಲಿ ಜೋರಾಗಿಯೇ ನಡೀತಿದೆ. ಡೆಡ್ಬಾಡಿ ಅಂತ್ಯಸಂಸ್ಕಾರದ ಹೆಸರಿನಲ್ಲಿ ಚಿತಾಗಾರದ ಸಿಬ್ಬಂದಿ ಹಣದ ಡಿಮ್ಯಾಂಡ್ ಇಡುತ್ತಿದ್ದಾರೆ.
ಸಾಮಾನ್ಯವಾಗಿ ಕೊವಿಡ್ ಅಲ್ಲದ ಪರಿಸ್ಥಿತಿಯಲ್ಲಿ ಒಂದು ಡೆಡ್ಬಾಡಿ ಸುಡಬೇಕು ಅಂದ್ರೆ ಬಿಬಿಎಂಪಿಯಿಂದ ಫಿಕ್ಸ್ ಮಾಡಿರೋ ಫೀಸ್ ಕೇವಲ 250 ರುಪಾಯಿ. ಕೊವಿಡ್ನಿಂದ ಸತ್ತಿರೋ ಡೆಡ್ ಬಾಡಿಯಾಗಿದ್ರೂ ಅಷ್ಟೇ ಫೀಸ್. ಆದ್ರೆ, ಕೊವಿಡ್ ಹೆಸರಲ್ಲಿ ವಿದ್ಯುತ್ ಚಿತಾಗಾರಗಳ ಸಿಬ್ಬಂದಿ ಡೆಡ್ ಬಾಡಿ ಅಂತಿಮ ಸಂಸ್ಕಾರದಲ್ಲೂ ಲೂಟಿಗಿಳಿದಿದ್ದಾರೆ.
ಒಂದು ಡೆಡ್ ಬಾಡಿಯ ಅಂತಿಮ ಸಂಸ್ಕಾರಕ್ಕೆ 4ಸಾವಿರದಿಂದ 11,500 ರುಪಾಯಿವರೆಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಬೆಂಗಳೂರಲ್ಲಿರೋ ವಿದ್ಯುತ್ ಚಿತಾಗರಗಳಲ್ಲಿ ಕೊವಿಡ್ನಿಂದ ಸತ್ತಿರೋ ಡೆಡ್ಬಾಡಿಯ ಅಂತ್ಯಸಂಸ್ಕಾರಕ್ಕೆ ಏನೆಲ್ಲಾ ನಿಯಮಗಳನ್ನ ಪಾಲಿಸ್ತಿದ್ದಾರೆ ಮತ್ತು ಎಷ್ಟೆಲ್ಲಾ ಚಾರ್ಜ್ ಮಾಡ್ತಿದ್ದಾರೆ ಅಂತಾ ಬಯಲಿಗೆಳೆಯೋದಕ್ಕೆ ಟಿವಿ9 ರಹಸ್ಯ ಕಾರ್ಯಾಚರಣೆ ನಡೆಸಿದೆ.
Published On - 9:24 am, Sat, 25 July 20