ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ: ಈದ್ಗಾ ಮೈದಾನದಲ್ಲಿ ನಡೀತು ಹೈಡ್ರಾಮಾ!
ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಅಧ್ಯಕ್ಷ ನಾವು ಹೋರಾಟ ಮಾಡಿದ್ವಿ. ಈಗ ನಮಗೆ ಯಾಕೆ ಅವಕಾಶ ಕೊಡುತ್ತಿಲ್ಲ ಅಂತ ಮಾತನಾಡುವಾಗ ಸ್ಥಳಕ್ಕೆ ಬಂದು ಶಿವಕುಮಾರ್ ನಾಯಕ್ ಗಲಾಟೆ ಮಾಡಿದರು.
ಬೆಂಗಳೂರು: ವಿವಾದಿತ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಮರಾಜಪೇಟೆ ಮೈದಾನ ಸಿದ್ದವಾಗಿದೆ. ವಿವಾದದ ಬಳಿಕ ಇತಿಹಾಸದಲ್ಲಿ ಮೊದಲಿಗೆ ಇಂದು ತ್ರಿವರ್ಣ ಧ್ವಜ ಹಾರಲಿದ್ದು, ವಿವಾದಿತ ಮೈದಾನದಲ್ಲಿ ಎಲ್ಲೆಲ್ಲೂ ಖಾಕಿ ಕಣ್ಗಾವಲು ವಹಿಸಿದೆ. ಈ ನಡುವೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ವಿಐಪಿ ಗೇಟ್ ಮೂಲಕವೇ ಎಂಟ್ರಿಗೆ ಮುಂದಾಗಿದ್ದು, ಏನ್ರಿ ನಮ್ಮಿಂದಲೇ ಇಂದು ಇಲ್ಲಿ ಧ್ವಜಾರೋಹಣ ಆಗುತ್ತಿರುವುದು. ನಮ್ಮನ್ನೇ ಬಿಡೊಲ್ಲ ಅಂದರೆ ಹೇಗೆ ಅಂತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪೊಲೀಸರೊಂದಿಗೆ ವಾಗ್ವಾದ ಮಾಡಿದರು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮನವೊಲಿಸಲು ಯತ್ನಿಸಿದ್ದು, ವಾಪಾಸ್ ಹೋಗಿ ಸಾರ್ವಜನಿಕರ ಗ್ಯಾಲರಿಯಲ್ಲಿ ಕೂರುವಂತೆ ವಾರ್ನಿಂಗ್ ಮಾಡಿದರು.
ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಅಧ್ಯಕ್ಷ ನಾವು ಹೋರಾಟ ಮಾಡಿದ್ವಿ. ಈಗ ನಮಗೆ ಯಾಕೆ ಅವಕಾಶ ಕೊಡುತ್ತಿಲ್ಲ ಅಂತ ಮಾತನಾಡುವಾಗ ಸ್ಥಳಕ್ಕೆ ಬಂದು ಶಿವಕುಮಾರ್ ನಾಯಕ್ ಗಲಾಟೆ ಮಾಡಿದ್ದು, ಮೊದಲು ನಾನೇ ಧ್ವಜ ಹಾರಿಸಿದ್ದು ಅಂತ ಅವಾಜ್ ಹಾಕಲಾಗಿದೆ. ಸುಮಾರು 20 ಅಡಿಯ ಧ್ವಜ ಸ್ತಂಭವನ್ನು ಕಂದಾಯ ಇಲಾಖೆ ನೆಟ್ಟಿದ್ದು, ಇಂದು ಬೆಳಗ್ಗೆ 8 ಗಂಟೆಗೆ ರಾಜ್ಯ ಸರ್ಕಾರ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಅವರಿಂದ ಧ್ವಜಾರೋಹಣ ನೆರವೇರಿಸಲಿದ್ದಾರೆ.