ಹೆಣ್ಮಕ್ಕಳ ಬಗ್ಗೆ ಬೇರೆ ರೀತಿ ಮಾತಾಡಿದ ಧ್ರುವಂತ್: ಗ್ರಹಚಾರ ಬಿಡಿಸಿದ ಕಾವ್ಯ, ರಾಶಿಕಾ

Updated on: Nov 10, 2025 | 5:13 PM

ಧ್ರುವಂತ್ ಅವರು ಬಿಗ್ ಬಾಸ್ ಮನೆಯ ಒಳಗೆ ಹೆಣ್ಮಕ್ಕಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ರಾಶಿಕಾ ಶೆಟ್ಟಿ ಮೇಲೆ ಧ್ರುವಂತ್ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಕಾವ್ಯ ಬಳಿ ಹೋಗಿ ಅವರು ಆಡಿದ ಮಾತಿನಿಂದ ದೊಡ್ಡ ಜಗಳ ಶುರುವಾಗಿದೆ. ಧ್ರುವಂತ್ ವಿರುದ್ಧ ರಾಶಿಕಾ, ಕಾವ್ಯ ತಿರುಗಿ ಬಿದ್ದಿದ್ದಾರೆ.

ಕಿರುತೆರೆ ನಟ ಧ್ರುವಂತ್ (Dhruvanth) ಅವರು ಬಿಗ್ ಬಾಸ್ ಮನೆಯಲ್ಲಿ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ರಾಶಿಕಾ ಬಗ್ಗೆ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಕಾವ್ಯ ಬಳಿ ಹೋಗಿ ಧ್ರುವಂತ್ ನೀಡಿದ ಹೇಳಿಕೆ ದೊಡ್ಡ ಜಗಳಕ್ಕೆ ಕಾರಣ ಆಗಿದೆ. ಧ್ರುವಂತ್ ವಿರುದ್ಧ ರಾಶಿಕಾ ಶೆಟ್ಟಿ (Rashikha Shetty) ಮತ್ತು ಕಾವ್ಯ ಶೈವ ಅವರು ತಿರುಗಿ ಬಿದ್ದಿದ್ದಾರೆ. ‘ಹೆಣ್ಮಕ್ಕಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ. ‘ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ’ ಎಂದು ಕಾವ್ಯ (Kavya Shaiva) ಅವರು ತಿರುಗೇಟು ನೀಡಿದ್ದಾರೆ. ನವೆಂಬರ್ 10ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.