Student writes to CM: ಕೊಪ್ಪಳದ 8ನೇ ತರಗತಿ ವಿದ್ಯಾರ್ಥಿನಿ ಬರೆದ ಅಭಿನಂದನಾ ಪತ್ರಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2023 | 10:18 AM

ಶ್ರೇಯಾಂಕ್ ಶ್ರಮವಹಿಸಿ ಓದಿ, ವಿದ್ಯಾವಂತಳಾಗಿ ಸಮಾಜಕ್ಕೆ ತನ್ನ ಕೊಡುಗೆ ನೀಡಿ ಬೇರೆಯವರಿಗೆ ಮಾದರಿಯಾಗಲಿ ಎಂದು ಸಿಎಂ ಆಶೀರ್ವದಿಸಿದ್ದಾರೆ.

ಬೆಂಗಳೂರು: ಕೊಪ್ಪಳದ ಸರ್ಕಾರೀ ಶಾಲೆಯೊಂದರಲ್ಲಿ 8ನೇ ಈಯತ್ತೆ ವಿದ್ಯಾರ್ಥಿನಿಯಾಗಿರುವ ಶ್ರೇಯಾಂಕ್ ವಿ ಮೆಣಸಿಗಿ (Shreyank V Mensigi) ಸಿದ್ದರಾಮಯ್ಯನವರಿಗೆ (Siddaramaiah) ಪತ್ರವೊಂದನ್ನು ಬರೆದಯ ಎರಡನೇ ಬಾರಿ ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಅಭಿನಂದಿಸಿದ್ದಾಳೆ. ತನ್ನ ಪತ್ರದಲ್ಲಿ ಆಕೆ ಸಿದ್ದರಾಮಯ್ಯರ ಜನಪರ ಕಾಳಜಿಯನ್ನು ಕೊಂಡಾಡಿ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ ಅನ್ನಭಾಗ್ಯ, ಶೂಭಾಗ್ಯ, ಕ್ಷೀರಭಾಗ್ಯ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದ್ದಾಳೆ. ಸಿದ್ದರಾಮಯ್ಯ ದೀನದಲಿತರು, ಬಡವರ ಪರವಾಗಿರುವ ನಾಯಕ ಎಂದು ಶ್ರೇಯಾಂಕ್ ಶ್ಲಾಘಿಸಿದ್ದಾಳೆ. ಗಮನಿಸಬೇಕಾದ ಸಂಗತಿಯೆಂದರೆ, ಮುಖ್ಯಮಂತ್ರಿ ಮಗುವಿನ ಪತ್ರಕ್ಕೆ ಉತ್ತರ ಬರೆದಿದ್ದಾರೆ. ಆಕೆಗಿರುವ ಸಾಮಾಜಿಕ ಕಳಕಳಿಯನ್ನು (social concern) ಗಣ್ಯರು ಕೊಂಡಾಡಿದ್ದಾರೆ. ಶ್ರೇಯಾಂಕ್ ಶ್ರಮವಹಿಸಿ ಓದಿ, ವಿದ್ಯಾವಂತಳಾಗಿ ಸಮಾಜಕ್ಕೆ ತನ್ನ ಕೊಡುಗೆ ನೀಡಿ ಬೇರೆಯವರಿಗೆ ಮಾದರಿಯಾಗಲಿ ಎಂದು ಸಿಎಂ ಆಶೀರ್ವದಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.