ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಛತ್ ಪೂಜೆ ವೇಳೆಯೇ ದೆಹಲಿಯ ಯಮುನಾ ನದಿಯ ಸ್ವಚ್ಛತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಯಮುನಾ ನದಿಯಲ್ಲಿ ಬಿಳಿಯಾದ ವಿಷಕಾರಿ ನೊರೆ ತುಂಬಿ, ಅದರಲ್ಲೇ ಛತ್ ಪೂಜೆ ಮಾಡುವ ಭಕ್ತರು ಮುಳುಗೇಳುತ್ತಿದ್ದರು. ಇದರಿಂದ ಚರ್ಮ ರೋಗ ಉಂಟಾಗಬಹುದು ಎಂಬ ಆತಂಕ ಎದುರಾಗಿತ್ತು. ಇದೀಗ ಆ ನದಿಯನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ.
ನವದೆಹಲಿ, ನವೆಂಬರ್ 17: ದೆಹಲಿ ಮತ್ತು ಸುತ್ತಮುತ್ತಲಿನ ಯಮುನಾ ನದಿಯಲ್ಲಿ (Yamuna River) ವಿಷಕಾರಿ ನೊರೆ ತೇಲುತ್ತಿತ್ತು. ಇದು ಸ್ಥಳೀಯರಲ್ಲಿ ಆರೋಗ್ಯದ ಆತಂಕ ಹೆಚ್ಚಿಸಿತ್ತು. ಅತಿಯಾದ ಪ್ರಮಾಣದ ಫಾಸ್ಫೇಟ್‌ಗಳು ಮತ್ತು ಇತರ ಸರ್ಫ್ಯಾಕ್ಟಂಟ್‌ಗಳು ಮತ್ತು ಡಿಟರ್ಜೆಂಟ್‌ಗಳಿಂದ ಈ ವಿಷಕಾರಿ ನೊರೆ ನಿರ್ಮಾಣವಾಗಿತ್ತು. ಇವು ಯಕೃತ್ತಿನ ಹಾನಿ, ಥೈರಾಯ್ಡ್ ಕಾಯಿಲೆ, ಹೆಚ್ಚಿದ ಕೊಲೆಸ್ಟ್ರಾಲ್ ಮತ್ತು ರೋಗನಿರೋಧಕ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳ ಮೇಲಿನ ಪರಿಣಾಮಗಳು (ಸಂಭಾವ್ಯ ಬಂಜೆತನ ಸೇರಿದಂತೆ), ವೃಷಣ ಮತ್ತು ಮೂತ್ರಪಿಂಡದ ಕ್ಯಾನ್ಸರ್, ಹಾರ್ಮೋನುಗಳ ಅಸಮತೋಲನ ಮತ್ತು ಮಕ್ಕಳ ಮೇಲಿನ ಬೆಳವಣಿಗೆಯ ತೊಂದರೆಯನ್ನು ಉಂಟುಮಾಡುವ ಸಾಧ್ಯತೆಯಿತ್ತು. ಇದೀಗ ಯಮುನಾ ನದಿಯಲ್ಲಿನ ನೊರೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ