Video: ಏಕಾಏಕಿ ಮೇಘಸ್ಫೋಟ, ಟ್ರ್ಯಾಕ್ಟರ್​ ಮೇಲಿದ್ದವರು ನೋಡ ನೋಡುತ್ತಲೇ ನೀರು ಪಾಲು

Updated on: Sep 16, 2025 | 2:19 PM

ಡೆಹ್ರಾಡೂನ್​ನಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಟನ್ಸ್​ ನದಿ ಉಕ್ಕಿ ಹರಿದಿದ್ದು, ಟ್ರ್ಯಾಕ್ಟರ್​ನಲ್ಲಿ ಉಸಿರು ಬಿಗಿ ಹಿಡಿದು ಕೂತವರು ನೋಡ ನೋಡುತ್ತಲೇ ನೀರು ಪಾರಾಗಿರುವ ವಿಡಿಯೋ ವೈರಲ್ ಆಗಿದೆ. ಟ್ರ್ಯಾಕ್ಟರ್​ನಲ್ಲಿ 10 ಮಂದಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಸಹಾಯಕ್ಕಾಗಿ ಕೂಗುತ್ತಿದ್ದರು. ಆದರೆ ಇಲ್ಲಿಂದ ಅಲ್ಲಿಗೆ ಹೋಗಲು ಯಾರಿಗೂ ಸಾಧ್ಯವಾಗಲಿಲ್ಲ.

ಡೆಹ್ರಾಡೂನ್, ಸೆಪ್ಟೆಂಬರ್ 16: ಡೆಹ್ರಾಡೂನ್​ನಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಟನ್ಸ್​ ನದಿ ಉಕ್ಕಿ ಹರಿದಿದ್ದು, ಟ್ರ್ಯಾಕ್ಟರ್​ನಲ್ಲಿ ಉಸಿರು ಬಿಗಿ ಹಿಡಿದು ಕೂತವರು ನೋಡ ನೋಡುತ್ತಲೇ ನೀರು ಪಾರಾಗಿರುವ ವಿಡಿಯೋ ವೈರಲ್ ಆಗಿದೆ. ಟ್ರ್ಯಾಕ್ಟರ್​ನಲ್ಲಿ 10 ಮಂದಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಸಹಾಯಕ್ಕಾಗಿ ಕೂಗುತ್ತಿದ್ದರು. ಆದರೆ ಇಲ್ಲಿಂದ ಅಲ್ಲಿಗೆ ಹೋಗಲು ಯಾರಿಗೂ ಸಾಧ್ಯವಾಗಲಿಲ್ಲ.

ರಾತ್ರಿಯಿಡೀ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಡೆಹ್ರಾಡೂನ್, ಮಸ್ಸೂರಿ ಮತ್ತು ಮಾಲ್ ದೇವ್ತಾ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಮನೆಗಳಿಗೆ ಭಾರಿ ಹಾನಿಯಾಗಿದೆ. ಡೆಹ್ರಾಡೂನ್‌ನ ಪ್ರೇಮ್ ನಗರದ ಕಾನೂನು ಕಾಲೇಜು ಬಳಿಯ ಸೇತುವೆ ಕೊಚ್ಚಿಹೋಗಿದೆ. ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಸುಮಾರು 400 ಜನರನ್ನು ಸ್ಥಳಾಂತರಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ