ಸಿಎಂ ಮತ್ತು ಡಿಸಿಎಂ ಪ್ರಾಮಿಸ್ ಮಾಡವ್ರೆ, ನನ್ನನ್ನು ಮಂತ್ರಿ ಮಾಡಲೇಬೇಕು: ಹೆಚ್ ಸಿ ಬಾಲಕೃಷ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Nov 28, 2024 | 6:30 PM

ಕಾಂಗ್ರೆಸ್ ಪಕ್ಷದವರು ಕೆಲಸ ಮಾಡಲಿ ಅಂತ ಚನ್ನಪಟ್ಟಣದ ಜನ ತೀರ್ಪು ನೀಡಿದ್ದಾರೆ, ಕೆಲಸ ಮಾಡುತ್ತೇಬೆ ಎಂದು ಹೇಳಿದ ಬಾಲಕೃಷ್ಣ ಜೆಡಿಎಸ್ ಪಕ್ಷದ ಶಾಸಕರನ್ನು ಕಾಂಗ್ರೆಸ್​ಗೆ ಕರೆತರುವ ವಿಚಾರವನ್ನು ಯೋಗೇಶ್ವರ್ ಅವರನ್ನೇ ಕೇಳಬೇಕು, ತನಗೆ ಅಷ್ಟೆಲ್ಲ ತಾಕತ್ತಿಲ್ಲ ಎಂದು ಹೇಳಿದರು.

ಬೆಂಗಳೂರು: ಸಂಪುಟ ಪುನಾರಚನೆಯ ಸುದ್ದಿ ಹರಡುತ್ತಲೇ ಕಾಂಗ್ರೆಸ್ ಶಾಸಕರ ಆಸೆಗಳು ಗರಿಗೆದರಿವೆ. ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ತನಗೆ ಮಂತ್ರಿ ಸ್ಥಾನ ಸಿಗಲೇಬೇಕು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ, ಪೊಲೀಸ್ ಕೆಲಸ ಮಾಡಿ ಸಾಕಾಗಿದೆ, ಪ್ರಮೋಶನ್ ಬೇಕೇಬೇಕು, ತಾನು ಲಾಬಿ ಮಾಡುವ ಕೆಲಸಕ್ಕೆ ಹೋಗಲ್ಲ, ಉಪ ಚುನಾವಣೆಯಲ್ಲಿ ತಾನು ಮಾಡಿದ ಕೆಲಸ ಹೈಕಮಾಂಡ್​ಗೆ ಗೊತ್ತಿದೆ, ಯೋಗೇಶ್ವರ್ ಅವರೂ ಆಕಾಂಕ್ಷಿಯೇ, ಮಿನಿಸ್ಟ್ರಾಗಲು ಯಾರಿಗೆ ಆಸೆ ಇರಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೇರೆ ಸಿಎಂಗಳ ತರ ಸಿದ್ದರಾಮಯ್ಯ ಆಸ್ತಿ ಮಾಡಲು ಮುಂದಾಗಿದ್ರೆ ಅರ್ಧ ಬೆಂಗಳೂರು ಅವರದ್ದೇ ಇರ್ತಿತ್ತು: ಶಾಸಕ ಬಾಲಕೃಷ್ಣ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.